ಲವ್ಲಿ ಸ್ಟಾರ್ ಪ್ರೇಮ್ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ಸಾಥ್..!

ನೆನಪಿರಲಿ ಪ್ರೇಮ್ ನಟಿಸಿರುವ ‘ಪ್ರೇಮಂ ಪೂಜ್ಯಂ’ ಸಿನಿಮಾಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಬಲ ದಕ್ಕಿದೆ. ‘ಪ್ರೇಮಂ ಪೂಜ್ಯಂ’ ಸಿನಿಮಾ ವೀಕ್ಷಿಸಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ ದರ್ಶನ್.
”ಪ್ರೇಮಂ-ಪೂಜ್ಯಂ’ ಸಿನಿಮಾ ನವೆಂಬರ್ 12ನೇ ತಾರೀಖು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಇಡೀ ಕರ್ನಾಟಕದ ಜನತೆ ಹಾಗೆ ಎಲ್ಲರೂ ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿ ಹರಸಿ ಎಂದು ಕೇಳಿಕೊಳ್ಳುತ್ತೇನೆ” ಎಂದಿದ್ದಾರೆ ದರ್ಶನ್.
ಅಕ್ಟೋಬರ್ 29 ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. ‘ಭಜರಂಗಿ 2’ ಹಾಗೂ ‘ಪ್ರೇಮಂ ಪೂಜ್ಯಂ’ ಸಿನಿಮಾ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆ ಇತ್ತು, ಕೊನೆಗೆ ‘ಪ್ರೇಮಂ ಪೂಜ್ಯಂ’ ಸಿನಿಮಾದ ಬಿಡುಗಡೆಯನ್ನು ಎರಡು ವಾರ ತಡ ಮಾಡಲಾಯ್ತು. ಅಕ್ಟೋಬರ್ 29 ರಂದು ‘ಭಜರಂಗಿ 2’ ಸಿನಿಮಾ ಬಿಡುಗಡೆ ಆಯ್ತು, ಅದೇ ದಿನ ಪುನೀತ್ ರಾಜ್‌ಕುಮಾರ್ ನಿಧನವಾದ ಕಾರಣ ಆ ಸಿನಿಮಾಕ್ಕೆ ತೀವ್ರ ಹಿನ್ನಡೆ ಉಂಟಾಯಿತು.
ಪುನೀತ್ ರಾಜ್‌ಕುಮಾರ್ ನಿಧನದಿಂದಾಗಿ ಸಿನಿಮಾ ಪ್ರಚಾರ ಕಾರ್ಯ ತಡವಾಗಿ ಪ್ರಾರಂಭ ಮಾಡಲಾಗಿದೆ.ಈಗ ಚಿತ್ರದ ಪ್ರಚಾರ ಕೆಲಸ ಶುರುವಾಗಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವ ಚಿತ್ರ ತಂಡ ಚಿತ್ರವನ್ನು ವೀಕ್ಷಿಸುವಂತೆ ಮನವಿ ಮಾಡುತ್ತಿದೆ.
****