ರಿಲೀಸ್ ಗೆ ರೆಡಿಯಾಯ್ತು ಏಕ್ ಲವ್ ಯಾ ಚಿತ್ರದ 4 ನೇ ಸಾಂಗ್!
ಈ ಹಾಡಿನ ಸಣ್ಣ ಝಲಕ್ ಅನ್ನು ನಿರ್ದೇಶಕ ಪ್ರೇಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, 11ಕ್ಕೆ ಈ ಹಾಡು ರಿಲೀಸ್ ಆಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಏಕ್ ಲವ್ ಯಾ ಸಿನಿಮಾ ಒಂದೊಳ್ಳೆ ಪ್ರೇಮಕಥೆಯನ್ನು ಹೇಳಲು ಹೊರಟಿದ್ದು ಶೂಟಿಂಗ್ ಕಂಪ್ಲೀಟ್ ಮಾಡಿ ರಿಲೀಸ್‌ಗೆ ಸಜ್ಜಾಗುತ್ತಿದೆ. ಇದರ ನಡುವಲ್ಲಿ ಚಿತ್ರದ ಟೀಸರ್ ಮತ್ತು ಒಂದೊಂದೇ ಹಾಡುಗಳನ್ನು ಚಿತ್ರತಂಡ ರಿಲೀಸ್ ಮಾಡುತ್ತಿದೆ. ಇದೀಗ ಚಿತ್ರದ ಮತ್ತೊಂದು ಹಾಡು ರಿಲೀಸ್‌ಗೆ ಸಜ್ಜಾಗಿದೆ.
ಏಕ್ ಲವ್ ಯಾ ಚಿತ್ರದ 4ನೇ ಹಾಡು ರಿಲೀಸ್ ಆಗುತ್ತಿದ್ದು, ಅನಿತಾ ಅನಿತಾ ಎಂಬ ಲಿರಿಕ್ಸ್ ಈ ಹಾಡಿನಲ್ಲಿದೆ. ಇದೇ ತಿಂಗಳ ಅಂದರೇ ಡಿಸೆಂಬರ್ 11ನೇ ತಾರೀಖು ಈ ಅನಿತಾ ಅನಿತಾ ಹಾಡು ರಿಲೀಸ್ ಆಗಲಿದ್ದು,ಇದು ಹುಡುಗರಿಗೆ ಬ್ರೇಕ್ ಅಪ್ ಆದಾಗ ಏನೇನು ಮಾಡುತ್ತಾರೆ, ಬ್ರೇಕ್ ಅಪ್ ಆದರೂ ಹುಡುಗರು ಪ್ರೀತಿಯನ್ನು ಮರೆಯೊದಿಲ್ಲ ಎಂಬ ಸಾರಾಂಶವನ್ನು ಹೊಂದಿದೆಯಂತೆ. ಈ ಹಿಂದೆ ಹೆಣ್ಣು ಮಕ್ಕಳ ಬ್ರೇಕ್ ಅಪ್ ಸಾಂಗ್ ರಿಲೀಸ್ ಮಾಡಿದ್ದ ಚಿತ್ರತಂಡ ಈಗ ಹುಡುಗರಿಗಾಗಿ ಈ ಸಾಂಗ್ ಅನ್ನು ರಿಲೀಸ್ ಮಾಡುತ್ತಿದೆ.
ಅನಿತಾ ಅನಿತಾ ಸಾಂಗ್ ರಿಲೀಸ್‌ಗೆ ಚಿತ್ರತಂಡ ವಿಶೇಷ ತಯಾರಿಯನ್ನು ಮಾಡಿಕೊಂಡಿದೆ. ಹುಬ್ಬಳಿಯಲ್ಲಿ ಸಾಂಗ್ ರಿಲೀಸ್ ಈವೆಂಟ್ ಮಾಡಲು ಚಿತ್ರತಂಡ ಪ್ರಿಪರೇಷನ್ ನಡೆಸುತ್ತಿದ್ದು, ಡಿಸೆಂಬರ್ 11ಕ್ಕೆ ಬೆಳಗ್ಗೆ 11 ಗಂಟೆಗೆ ಈ ಹಾಡು ರಿಲೀಸ್ ಆಗಲಿದೆ. ಈ ಅನಿತಾ ಅನಿತಾ ಹಾಡನ್ನು ಖ್ಯಾತ ಗಾಯಕ ಶಂಕರ್ ಮಹದೇವನ್ ಅವರು ಹಾಡಿದ್ದು, ನವ ಪ್ರತಿಭೆ ಹಾಗೂ ಪಂಚಾಕ್ಷರಿ ಗವಾಯಿ ಅವರ ಶಿಷ್ಯರು ಆಗಿರುವ ಶರಣ ಕುಮಾರ ಗಜೇಂದ್ರ ಗಡ ಅವರು ಹಾಡಿಗೆ ಸಾಹಿತ್ಯ ನೀಡಿದ್ದಾರೆ. ಏಕ್‌ಲವ್‌ಯಾ ಚಿತ್ರದಲ್ಲಿ ಒಟ್ಟು 7 ಹಾಡುಗಳಿದ್ದು, ಮುಂದಿನ ದಿನಗಳಲ್ಲಿ ಉಳಿದ ಹಾಡುಗಳನ್ನು ರಿಲೀಸ್ ಮಾಡುವ ತಯಾರಿಯಲ್ಲಿದೆ ಚಿತ್ರತಂಡ.
****