ರಿಯಲ್ ಸ್ಟಾರ್ ಉಪ್ಪಿ ನಿರ್ದೇಶನದ ಹೊಸ ಚಿತ್ರದ ಟೈಟಲ್ ಲೀಕ್..!

ಕನ್ನಡ ಚಿತ್ರರಂಗಕ್ಕೆ ಒಂದು ಹೊಸ ವರ್ಷನ್ ತಂದುಕೊಟ್ಟ ನಟ ನಿರ್ದೇಶಕ ಉಪೇಂದ್ರ ಈಗ ಮತ್ತೆ ನಿರ್ದೇಶಕ್ಕೆ ಮುಂದಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಅವರು ಡೈರೆಕ್ಟ್ ಮಾಡುತ್ತಿರುವ ಸಿನಿಮಾ ಟೈಟಲ್ ಏನೆಂಬುದು ಬಹಿರಂಗವಾಗಿರಲಿಲ್ಲ, ಆದರೆ ಈಗ ಉಪೇಂದ್ರ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಉಪೇಂದ್ರ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದ ಟೈಟಲ್ ಪೋಸ್ಟರ್ ಲೀಕ್ ಆಗಿದೆ.

ಒಟ್ಟು ಐದು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದ್ದು ಪ್ಯಾನ್ ಇಂಡಿಯಾ ಸಿನಿಮಾದ ಸಿದ್ದತೆಯಲ್ಲಿರುವ ಚಿತ್ರದ ಹೆಸರು ಮೂರ್ನಾಮ(ಪಂಗನಾಮ) ಅಂತ ಹೇಳಲಾಗಿದೆ.ಅಥವಾ ಯು ಆಂಡ್ ಐ( U & I)ಕೂಡ ಇರಬಹುದು ಎಂದು ಸ್ಯಾಂಡಲ್ ವುಡ್ ಮಾತನಾಡಿಕೊಳ್ಳುತ್ತಿದೆ.ಉಪೇಂದ್ರ ಈ ಹಿಂದೆ ನಿರ್ದೇಶನ ಮಾಡಿದ್ದ ಸೂಪರ್ ಚಿತ್ರದ ಟೈಟಲ್ ಕೂಡ ಇದೇ ರೀತಿ ಪ್ರೇಕ್ಷಕರನ್ನು ಪನ್ಫ್ಯೂಸ್ ಮಾಡಿತ್ತು ಅದೇ ಪ್ಯಾಟ್ರನ್ ಇಲ್ಲೂ ಮುಂದುವರೆಸಿದ್ದಾರೆ ಉಪೇಂದ್ರ.
ಸೆಪ್ಟೆಂಬರ್ 18 ರಂದು ಉಪೇಂದ್ರ ಅವರ ಹುಟ್ಟುಹಬ್ಬವಿದ್ದು, ಈ ಸಂದರ್ಭದಲ್ಲಿ ಸೂಪರ್ ಸ್ಟಾರ್ ಉಪ್ಪಿ, ನಗರದಿಂದ ಹೊರ ಹೋಗಿ ಕುಟುಂಬದೊಂದಿಗೆ ಕಾಲ ಕಳೆಯಲು ನಿರ್ಧರಿಸಿದ್ದಾರೆ. ಪ್ರಸ್ತುತ ಉಪೇಂದ್ರ ಅವರು ಲಗಾಮ್ ಹಾಗೂ ಕಬ್ಜಾ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.
****