ರಾಮ್ ಗೋಪಾಲ್ ವರ್ಮಾ ಅವರಿಂದ ಉಪ್ಪಿ ಗೆ ಬಿಗ್ ಸರ್ಪ್ರೈಸ್

53ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಹೊಸ ಸಿನಿಮಾಗಳು ಅನೌನ್ಸ್ ಆಗುತ್ತಿವೆ. ಹಾಗೆಯೇ ಅವರು ನಟಿಸುತ್ತಿರುವ ಚಿತ್ರಗಳ ಪೋಸ್ಟರ್, ಟೀಸರ್ ಕೂಡ ಬಿಡುಗಡೆಯಾಗಲಿವೆ. ಎಲ್ಲವುಗಳಿಗಿಂತ ಅಭಿಮಾನಿಗಳು ಹೆಚ್ಚು ಕುತೂಹಲದಿಂದ ಕಾಯುತ್ತಿರುವುದು ಉಪ್ಪಿ ನಿರ್ದೇಶನಕ್ಕೆ ಕಮ್ಬ್ಯಾಕ್ ಮಾಡುತ್ತಿರುವ ಕುರಿತ ಅಪ್ಡೇಟ್ಗೆ. ಹೊಸ ಚಿತ್ರದ ಕುರಿತು ಮಾಹಿತಿ ನೀಡುವುದಾಗಿ ಉಪ್ಪಿ ಈ ಹಿಂದೆಯೇ ತಿಳಿಸಿದ್ದಾರೆ. ಇದೀಗ ಅಭಿಮಾನಿಗಳಿಗೆ ಸರ್ಪ್ರೈಸ್ ಒಂದು ಎದುರಾಗಿದೆ. ಹೌದು. ಬಾಲಿವುಡ್, ಟಾಲಿವುಡ್ನ ಹಿಟ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಉಪ್ಪಿ ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.
ಆರ್ಜಿವಿ ಟ್ವಿಟರ್ನಲ್ಲಿ ಸದಾ ಆಕ್ಟಿವ್ ಇರುತ್ತಾರೆ. ಅಲ್ಲಿ ತಮ್ಮ ಮುಂದಿನ ಯೋಜನೆಗಳ ಕುರಿತಾಗಿಯೂ ಅವರು ಮಾಹಿತಿ ಹಂಚಿಕೊಳ್ಳುತ್ತಾರೆ. ಇದೀಗ ಉಪೇಂದ್ರ ಅವರ ಜನ್ಮದಿನಕ್ಕೆ ಶುಭಾಶಯಗಳನ್ನು ತಿಳಿಸಿರುವ ಅವರು, ಅಭಿಮಾನಿಗಳಿಗೆ ಸರ್ಪ್ರೈಸ್ ಸುದ್ದಿಯನ್ನೂ ನೀಡಿದ್ದಾರೆ. ಅದೇನೆಂದರೆ, ಉಪೇಂದ್ರ ಹಾಗೂ ಆರ್ಜಜಿವಿ ಕಾಂಬಿನೇಷನ್ನಲ್ಲಿ ಹೊಸ ಆಕ್ಷನ್ ಚಿತ್ರವೊಂದು ಮೂಡಿಬರಲಿದೆ. ಅದನ್ನು ಸದ್ಯದಲ್ಲಿಯೇ ಪ್ರಾರಂಭಿಸುವುದಾಗಿಯೂ ಆರ್ಜಿವಿ ಘೋಷಿಸಿದ್ದಾರೆ. ಅಚ್ಚರಿಯ ಈ ಸುದ್ದಿಗೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.