ರಾಮು ಕನಸಿನ ‘ಅರ್ಜುನ್ ಗೌಡ’ ಡಿಸೆಂಬರ್ 31ಕ್ಕೆ ತೆರೆಗೆ
ಪ್ರಜ್ವಲ್ ದೇವರಾಜ್ ನಟನೆಯ ‘ಅರ್ಜನ್ ಗೌಡ’ ಒಂದು ಆ್ಯಕ್ಷನ್ ಪ್ರಧಾನ ಸಿನಿಮಾ. ಕೋಟಿ ರಾಮು ನಿರ್ಮಾಣದ ಈ ಚಿತ್ರವನ್ನು ಡಿ.31ರಂದು ತೆರೆಕಾಣಿಸಲು ಮಾಲಾಶ್ರೀ ನಿರ್ಧರಿಸಿದ್ದ, ಕಿಚ್ಚ ಸುದೀಪ್ ಕೂಡ ಸಾಥ್ ನೀಡಿದ್ದಾರೆ. ಹೌದು ಕೋಟಿ ನಿರ್ಮಾಪಕ ರಾಮು ಅವರು ನಿರ್ಮಿಸಿದ ಕೊನೆಯ ಚಿತ್ರ ಅರ್ಜುನ್ ಗೌಡ ಈ ಚಿತ್ರ ತೆರೆ ಕಾಣುವ ಮುನ್ನವೇ ಅವರು ಕಾಲವಾದರು. ಆದರೆ ಅವರ ಇಚ್ಚೆಯನ್ನು ಸಾಕಾರ ಮಾಡಲು ಅದರ ಹೊಣೆಯನ್ನು ಹೊರಲು ನಿಂತಿದ್ದಾರೆ ರಾಮು ಪತ್ನಿ ಮಾಲಾಶ್ರಿ. ಡಿಸೆಂಬರ್ 31 ರಂದು ತರೆಗೆ ಬರ್ತಿದ್ದಾನೆ ‘ಅರ್ಜುನ್ ಗೌಡ’
ಬಿಡುಗಡೆಗೆ ಸಿದ್ಧವಾಗಿರುವ ‘ಅರ್ಜುನ್ ಗೌಡ’ ಸಿನಿಮಾ ಬಗ್ಗೆ ನಟಿ ಮಾಲಾಶ್ರೀ ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ನಿರ್ಮಾಪಕ ರಾಮು ಅವರು ಅರ್ಜುನ್ ಗೌಡ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಸಿನಿಮಾ ಪೂರ್ತಿಯಾಗುವುದಕ್ಕೆ ಮುನ್ನವೇ ರಾಮು ನಿಧನರಾಗಿದ್ದರು. ಈಗ ಅರ್ಜುನ್ ಗೌಡ ಸಿನಿಮಾವನ್ನು ಕನ್ನಡ ಪ್ರೇಕ್ಷಕರ ಮುಂದೆ ತರುವ ರಾಮು ಆಸೆಯನ್ನು ಪತ್ನಿ, ನಟಿ ಮಾಲಾಶ್ರೀ ಪೂರೈಸುತ್ತಿದ್ದಾರೆ.

ಪ್ರಜ್ವಲ್ ದೇವರಾಜ್, ಪ್ರಿಯಾಂಕಾ ತಿಮ್ಮೇಶ್ ಮತ್ತು ಸಾಧು ಕೋಕಿಲ ಅರ್ಜುನ್ ಗೌಡ ಸಿನಿಮಾದಲ್ಲಿ ನಟಿಸಿದ್ದಾರೆ. ಲಕ್ಕಿ ಶಂಕರ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಯಶಸ್ಸು ಗಳಿಸುವ ನಂಬಿಕೆ ರಾಮು ಅವರಿಗಿತ್ತು ಎಂದು ಮಾಲಾಶ್ರೀ ತಿಳಿಸಿದ್ದಾರೆ. ಸಿನಿಮಾ ಡಿಸೆಂಬರ್ 31ಕ್ಕೆ ಬಿಡುಗಡೆಯಾಗುತ್ತಿದೆ.
****