News

ರಾಜ್ ಬಿ.ಶೆಟ್ಟಿ ನಿರ್ದೇಶನದ ‘GGVV’ ಸಿನಿಮಾ ನೋಡಿ ಏನಂದ್ರು ಅನುರಾಗ್ ಕಶ್ಯಪ್..?

ರಾಜ್ ಬಿ.ಶೆಟ್ಟಿ ನಿರ್ದೇಶನದ ‘GGVV’ ಸಿನಿಮಾ ನೋಡಿ ಏನಂದ್ರು ಅನುರಾಗ್ ಕಶ್ಯಪ್..?
  • PublishedNovember 25, 2021

ರಾಜ್ ಬಿ. ಶೆಟ್ಟಿ ಬರೆದು, ನಿರ್ದೇಶಿಸಿ, ನಟಿಸಿರುವ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ನವೆಂಬರ್ 19ರಂದು ತೆರೆಕಂಡು ಸಿನಿಮಾರಸಿಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.ಈ ಹೊತ್ತಿನಲ್ಲಿ ಬಾಲಿವುಡ್ ನ ಹೆಸರಾಂತ ಪ್ರಯೋಗಾತ್ಮಕ ನಿರ್ದೇಶಕ ಅನುರಾಗ್ ಕಶ್ಯಪ್ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ನೋಡಿ ಒಳ್ಳೆಯ ಮಾತುಗಳನ್ನಾಡಿರುವುದು ಚಿತ್ರತಂಡದ ಹುಮ್ಮಸ್ಸನ್ನು ಹೆಚ್ಚಿಸಿದೆ. 

‘ಗರುಡ ಗಮನ ವೃಷಭ ವಾಹನ’ ಸಿನಿಮಾ ಸೃಷ್ಟಿಸಿದ ಹೈಪ್ ನಿಂದ ಸಿನಿಮಾ ನೋಡಿದ ಅನುರಾಗ್ ಕಶ್ಯಪ್ ಸಿನಿಮಾ ಮುಗಿದ ನಂತರ ರಾಜ್ ಬಿ. ಶೆಟ್ಟಿ ಜೊತೆ ಕರೆ ಮಾಡಿ ಮಾತನಾಡಿದ್ದಾರೆ. ಅನುರಾಗ್ ಕಶ್ಯಪ್ ದನಿ ಕೇಳುತ್ತಲೇ ರೋಮಾಂಚನಗೊಂಡೆ ಎಂದ ರಾಜ್ ಬಿ. ಶೆಟ್ಟಿ ಅನುರಾಗ್ ಕಶ್ಯಪ್ ಜೊತೆಗಿನ ಫೋನ್ ಸಂಭಾಷಣೆ ಕುರಿತು ವಿವರ ಬಿಚ್ಚಿಟ್ಟಿದ್ದಾರೆ. ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ಕೇವಲ 32 ದಿನಗಳಲ್ಲಿ ಶೂಟ್ ಮಾಡಿದ್ದೆಂದು ತಿಳಿದು ಅನುರಾಗ್ ತೀವ್ರ ಅಚ್ಚರಿಗೊಂಡರು.

ಗರುಡ ಗಮನ ವೃಷಭ ವಾಹನ ಸಿನಿಮಾ ಸುಬ್ರಮಣ್ಯಪುರಂ, ಅಂಗಮಾಲಿ ಡೈರೀಸ್ ಮತ್ತು ತಮ್ಮದೇ ಗ್ಯಾಂಗ್ಸ್ ಆಫ್ ವಸೇಪುರ್ ಸಿನಿಮಾಗಳಿಗಿಂತ ಭಿನ್ನವಾದುದು ಎಂದು ಅನುರಾಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಲ್ಲಕ್ಕಿಂತ ಹೆಮ್ಮೆಯ ಸಂಗತಿ ಎಂದರೆ ರಾಜ್ ಶೆಟ್ಟಿ ಅವರ ಸಿನಿಮಾ ಮೇಕಿಂಗ್ ಶೈಲಿಯ ಕುರಿತು ಮಾತುಕತೆ ನಡೆಸಲು ಅನುರಾಗ್ ಅವರು ರಾಜ್ ರನ್ನು ಮುಂಬೈಗೆ ಆಹ್ವಾನಿಸಿರುವುದು.

ಸಿನಿಮಾದಲ್ಲಿ ರಾಜ್ ಶೆಟ್ಟಿ, ರಿಷಬ್ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ವಿನೀತ್ ಕುಮಾರ್, ದೀಪಕ್ ರೈ ಪಾಣಾಜೆ ಅಭಿನಯಕ್ಕೆ ಪ್ರೇಕ್ಷಕರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಂಗೀತ ನಿರ್ದೇಶಕ ಮಿದುನ್ ಮುಕುಂದನ್, ಸಿನಿಮೆಟೊಗ್ರಾಫರ್- ಎಡಿಟರ್ ಪ್ರವೀಣ್ ಶ್ರಿಯಾನ್ವರ ನೈಪುಣ್ಯಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ. ಗರುಡ ಗಮನ ವೃಷಭ ವಾಹನ ಸಿನಿಮಾ ರಕ್ಷಿತ್ ಶೆಟ್ಟಿಯವರ ಪರಂವಾಹ್ ಸ್ಟುಡಿಯೋಸ್ ಬ್ಯಾನರ್ ಅಡಿ ಮೂಡಿ ಬಂದಿದ್ದು ಚಿತ್ರ ವಿತರಣೆ ಹಕ್ಕನ್ನು ಕೆ ಆರ್ ಜಿ ಸ್ಟುಡಿಯೋಸ್ ಪಡೆದುಕೊಂಡಿದೆ.

****

Written By
Kannadapichhar

Leave a Reply

Your email address will not be published. Required fields are marked *