ರಾಕಿ ಭಾಯ್ ಮುಂದಿನ ಚಿತ್ರಕ್ಕೆ ನರ್ತನ್ ನಿರ್ದೇಶನ..?

ಯಾವುದೇ ಕಲಾವಿದರಿಗಾಗಲಿ ಒಂದು ದೊಡ್ಡ ಬ್ರೇಕ್ ಸಿಕ್ಕಿತ್ತೆಂದರೆ ನಂತರ ಬರುವ ಅವರ ಸಿನಿಮಾಗಳ ಬಗ್ಗೆ ಸಾಕಷ್ಟು ಚ್ಯೂಸಿಯಾಗಿರುತ್ತಾರೆ ಮತ್ತು ಸಿನಿಮಾದ ಆಯ್ಕೆ ಬಗ್ಗೆಯೂ ಸಾಕಷ್ಟು ಎಚ್ಚರವಹಿಸಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈಗ ರಾಕಿಂಗ್ ಸ್ಟಾರ್ ಯಶ್ ಕೂಡ ಅದೇ ಸಾಲಿಗೆ ಸೇರುತ್ತಾರೆ. ಕೆಜಿಎಫ್ ಚಾಪ್ಟರ್ 2 ಇನ್ನು 2022 ಕ್ಕೆ ರಿಲೀಸ್ ಆಗಬೇಕಿದೆ ಕೆಜಿಎಫ್ ಚಾಪ್ಟರ್ 1 ಬಂದು ಮೂರು ವರ್ಷ ಕಳೆದೋಗಿದೆ. ಈಗ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಹವಾ ಜೋರಾಗಿ ನಡೀತಿದೆ, ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಸಿನಿಮಾಗಳ ಆಯ್ಕೆ ಬಗ್ಗೆ ಭಾರಿ ಎಚ್ಚರಿಕೆ ವಹಿಸಿರುವಂತೆ ಕಾಣುತ್ತಿದೆ.
ಕೆಜಿಎಫ್ ನಂತರ ಯಶ್ ಗೆ ಫಾಲೋಯರ್ಸ್ ಮತ್ತು ಫ್ಯಾನ್ಸ್ ದೊಡ್ಡ ಮಟ್ಟದಲ್ಲಿದ್ದಾರೆ. ಸದಾ ಮುಂಬೈ ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆಯೂ ಗಾಂಧಿ ನಗರದಲ್ಲಿ ಗುಸು ಗುಸು ಕೇಳಿಸುತ್ತಿದೆ. ಈಗ ಯಶ್ ಅವರು ಮುಂದಿನ ಸಿನಿಮಾದ ಬಗ್ಗೆ ಚರ್ಚೆಗಳು ಶುರುವಾಗಿದ್ದು, ಅವರ ಮುಂದಿನ ಸಿನಿಮಾವನ್ನ ಯಾರು ನಿರ್ದೇಶನ ಮಾಡುತ್ತಾರೆ ಎಂಬ ಕುತೂಹಲ ಸ್ಯಾಂಡಲ್ ವುಡ್ ನ ಪಡಸಾಲೆಯಲ್ಲಿ ಕಾವೇರಿದೆ. ಒಂದು ಮೂಲದ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾವನ್ನ ನರ್ತನ್ ಅವರು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
‘ಮಫ್ತಿ’ ಚಿತ್ರ ನಿರ್ದೇಶನ ಮಾಡಿದ್ದ ನರ್ತನ್ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗಿದ್ದು ಇನ್ನು ಚರ್ಚೆಯ ಹಂತದಲ್ಲಿ ಇದೆಯಂತೆ. ನಿರ್ದೇಶಕ ನರ್ತನ್ ಅವರು ಯಶ್ ಗಾಗಿ ಎರಡು ಕಥೆಗಳನ್ನು ಸಿದ್ದಪಡಿಸಿಕೊಂಡಿದ್ದಾರೆಂತೆ.ಪ್ಯಾನ್ ಇಂಡಿಯಾ ಚಿತ್ರ ಮಾಡುವ ತಯಾರಿಯಲ್ಲಿ ಮಾತು ಕತೆ ನಡೆಯುತ್ತಿದ್ದು ಆದಷ್ಟು ಬೇಗ ಮತ್ತಷ್ಟು ಅಪ್ ಡೇಟ್ ಗಳು ಮುಂದಿನ ದಿನಗಳಲ್ಲಿ ಹೊರ ಬೀಳಲಿದೆ.
****