ರಕ್ಷಿತ್ ಶೆಟ್ಟಿ ಕಂಡ ಕನಸನ್ನು ಅಳಿಸಿದ್ದು ಯಾರು …?

ಕನ್ನಡ ಸಿನಿಮಾರಂಗದ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಸದ್ಯ ತಮ್ಮ ಚಾರ್ಲಿ 777 ಸಿನಿಮಾದ ಬಿಡುಗಡೆಯ ತಯಾರಿಯಲ್ಲಿದ್ದಾರೆ …ಅದರೊಟ್ಟಿಗೆ ಹೇಮಂತ್ ಕುಮಾರ್ ನಿರ್ದೇಶನದ ರಕ್ಷಿತ್ ಅಭಿನಯದ ಸಪ್ತಸಾಗರದಾಚೆಯೆಲ್ಲೋ ಸಿನಿಮಾದ ಚಿತ್ರೀಕರಣದ ಮುಂದಿನ ಹಂತಕ್ಕೆ ತಯಾರಿ ನಡೆಸಿದ್ದಾರೆ… ಈ ಮಧ್ಯೆ ರಕ್ಷಿತ್ ಶೆಟ್ಟಿ ಕನ್ಯಾಕುಮಾರಿಯ ಕಡಲ ತೀರದಲ್ಲಿ ವಿಹರಿಸುತ್ತಿದ್ದಾರೆ..
ರಕ್ಷಿತ್ ಕನ್ಯಾಕುಮಾರಿಯಲ್ಲಿ ಸೀಕ್ರೆಟ್ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ…ಹೌದು ರಕ್ಷಿತ್ ಶೆಟ್ಟಿ ತಾವು ಕಂಡ ಕನಸನ್ನು ಅಳಿಸಲಾಗಿದೆ ಎಂಬ ವಿಚಾರವನ್ನ ಹೇಳಿಕೊಂಡಿದ್ದಾರೆ …ಆದರೆ ಅದು ಯಾವ ಕನಸು ಏನು ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ …ಕನ್ಯಾಕುಮಾರಿಯ ಕಡಲ ತೀರದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿರುವ ರಕ್ಷಿತ್ ಶೆಟ್ಟಿ 2ಸಾಲು ಕವನವನ್ನು ಬರೆದು ತಮ್ಮ ಮನಸ್ಸಿನ ಮಾತನ್ನು ಹೊರಹಾಕಿದ್ದಾರೆ ..

ರಕ್ಷಿತ್ ಶೆಟ್ಟಿ ಬರೆದಿರುವ ಕವನಗಳ ಸಾಲು ಹೀಗಿದೆ ದೂರದ ಗಗನದಲ್ಲಿ ಕನಸೊಂದ ಕಂಡು ಕೈ ಚಾಚಿದೆ ಅಪ್ಪಳಿಸಿ ಕಾಲಿಗೆ ಅಲೆಗಳು ನಾ ಕಂಡ ಹಾದಿಯನ್ನು ಅಳಿಸಿದೆ ..ಎಂದು ಬರೆದಿದ್ದಾರೆ….ರಕ್ಷಿತ್ ಶೆಟ್ಟಿ ಬರೆದಿರುವ ಈ ಕವನಗಳ ಸಾಲನ್ನು ಕಂಡ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ …ಕೆಲವರು ಮುಂದಿನ ಸಿನಿಮಾಗೆ ಆಲ್ ದ ಬೆಸ್ಟ್ ಹೇಳಿದರೆ… ಇನ್ನು ಕೆಲವರು ಒಂದಿಷ್ಟು ಸಲಹೆ ನೀಡಿದ್ದಾರೆ ಮತ್ತೊಂದು ಕನಸನ್ನ ಕಾಣಿ ಅದೆಂದಿಗೂ ಅಳಿಸಿ ಹೋಗದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ …