‘ರಂಗ ನಾಯಕ’ನಲ್ಲಿ ಮತ್ತೆ ಒಂದಾದ ಗುರು ಮತ್ತು ಜಗ್ಗೇಶ್

ನಟ ಜಗ್ಗೇಶ್ ಮತ್ತು ಗುರು ಪ್ರಸಾದ್ ಕಾಂಬಿನೇಷನ್ ನಲ್ಲಿ ಬಂದಿದ್ದ ‘ಮಠ’ ‘ಎದ್ದೇಳು ಮಂಜುನಾಥ’ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಸಕತ್ ಹಿಟ್ ಆಗಿದ್ದವು. ನಂತರ ಕೆಲ ದಿನಗಳು ನವರಸ ನಾಯಕ ಜಗ್ಗೇಶ್ ಮತ್ತು ಗುರು ಅವರ ನಡುವೆ ಯಾವುದೊ ಕಾರಣಕ್ಕೆ ಮನಸ್ತಾಪವಾಗಿ ದೂರ ಆಗಿದ್ದರು, ಈಗ ಮುನಿಸು ದೂರಮಾಡಿಕೊಂಡಿದ್ದು ಮತ್ತೆ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ತಯಾರಾಗುತ್ತಿದ್ದು ಚಿತ್ರ ಕ್ಕೆ ‘ರಂಗ ನಾಯಕ’ ಎಂದು ಹೆಸರಿಡಲಾಗಿದೆ.

ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಿರುವ ಚಿತ್ರ ತಂಡ
ಸಿನಿಮಾ ಬಗ್ಗೆ ಮಾಹಿತಿ ನೀಡೋಕೆ ಇಡೀ ಚಿತ್ರತಂಡ ಒಂದೆಡೆ ಸೇರಿತ್ತು. ಬೆಂಗಳೂರಿನಲ್ಲಿ ಅದ್ದೂರಿ ಸೆಟ್ನಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಗುರುಪ್ರಸಾದ್ ಮಾಹಿತಿ ಹಂಚಿಕೊಂಡಿದ್ದಾರೆ.
****