ಮೊದಲ ಹಂತದ ಚಿತ್ರೀಕರಣ ಮುಗಿಸಿದ ಹೆಡ್ ಬುಷ್ ಚಿತ್ರ ತಂಡ..!

ಡಾಲಿ ಧನಂಜಯ್ ಅಭಿನಯಿಸಿ ನಿರ್ಮಾಪಕನ ಜವಾಬ್ದಾರಿಯನ್ನೂ ಹೊತ್ತುಕೊಂಡಿರುವ ಹೆಡ್ ಬುಷ್ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. ಸಿನಿಮಾದ ಕಥೆ ಬರೆದಿರುವ ಅಗ್ನಿ ಶ್ರೀಧರ್ ಅವರು ಹೆಡ್ ಬುಷ್ ಸಿನಿಮಾದ ಪಾತ್ರಗಳನ್ನು ಬ್ರಿಲಿಯೆಂಟ್ ಆಗಿ ಚಿತ್ರಿಸಿದ್ದಾರೆ, ದೊಡ್ಡ ಪರದೆ ಮೇಲೆ ಒಂದೊಂದು ಪಾತ್ರಗಳೂ ಮಿಂಚಲಿವೆ ಎಂದು ಧನಂಜಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದುವರೆಗೂ 40 ದಿನಗಳ ಶೂಟ್ ಮುಗಿಸಿದ್ದು, ಇನ್ನೂ 60- 70 ದಿನಗಳ ಶೂಟ್ ಬಾಕಿಯಿದೆ ಎಂದು ತಂಡ ಮಾಹಿತಿ ಹಂಚಿಕೊಂಡಿದೆ.
ಹೆಡ್ ಬುಷ್ ಸಿನಿಮಾವನ್ನು ಶೂನ್ಯ ಅವರು ನಿರ್ದೇಶಿಸಿದ್ದಾರೆ. ಧನಂಜಯ್, ಪಾಯಲ್ ರಜಪೂತ್, ಯೋಗಿ, ವಸಿಷ್ಠ ಸಿಂಹ, ಶ್ರುತಿ ಹರಿಹರನ್, ರಘು ಮುಖರ್ಜಿ ಮತ್ತು ಬಾಲು ನಾಗೇಂದ್ರ ಅವರು ತಾರಾಗಣದಲ್ಲಿದ್ದಾರೆ. ಬೆಂಗಳೂರಿನ ಮೊದಲ ಅಂಡರ್ ವರ್ಲ್ಡ್ ಡಾನ್ ಎಂದು ಹೆಸರಾದ ಎಂ.ಪಿ ಜಯರಾಜ್ ಕುರಿತಾದ ಈ ಸಿನಿಮಾದಲ್ಲಿ ರವಿಚಂದ್ರನ್ ಮತ್ತು ದೇವರಾಜ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
****