ಮೃತ ಫೈಟರ್ ವಿವೇಕ್ ತಾಯಿಗೆ ರೂ 5ಲಕ್ಷ ಚೆಕ್ ನೀಡಿದ ನಿರ್ಮಾಪಕ ಗುರುದೇಶಪಾಂಡೆ

‘ಲವ್ ಯೂ ರಚ್ಚು’ ಚಿತ್ರದ ಶೂಟಿಂಗ್ ವೇಳೆ ಮೃತಪಟ್ಟ ಫೈಟರ್ ವಿವೇಕ್ ಕುಟುಂಬಕ್ಕೆ ನಿರ್ಮಾಪಕ ಗುರು ದೇಶಪಾಂಡೆ 5 ಲಕ್ಷ ರೂಗಳ ಚೆಕ್ ಹಸ್ತಾಂತರಿಸಿದ್ದಾರೆ. ಚಿತ್ರ ರಿಲೀಸ್ ಆದ ಬಳಿಕ ಇನ್ನೂ ₹5 ಲಕ್ಷ ನೀಡುವ ಭರವಸೆಯನ್ನು ಅವರು ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ವಿವೇಕ್ ತಮ್ಮನ ಶಿಕ್ಷಣಕ್ಕೂ ಹಣ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತಾವು ನಾಪತ್ತೆಯಾದ ವರದಿಗಳ ಕುರಿತು ಪ್ರತಿಕ್ರಿಯಿಸಿದ್ದಾರೆ. ‘‘ಪ್ರಕರಣದಿಂದಾಗಿ ನಾನು ತಲೆಮರೆಸಿಕೊಂಡು ಓಡಿಹೋಗಿರಲಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡಬೇಕಾದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದು ಹೊರಬಂದಿದ್ದೇನೆ’’ ಎಂದು ಅವರು ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಮೃತ ವಿವೇಕ್ ತಾಯಿ ಗುರು ದೇಶಪಾಂಡೆ ಕುರಿತು ‘ಈಗ ನೀವು ಏನು ಬೇಕಾದರೂ ಹೇಳಿ ಹೋಗಿಬಿಡುತ್ತೀರಿ. ನಂತರ ನಾವು ಫೋನ್ ಮಾಡಿದರೂ ರಿಸೀವ್ ಮಾಡಲ್ಲ, ನಮ್ಮ ಕಷ್ಟವನ್ನು ಕೇಳೋರು ಯಾರೂ ಇಲ್ಲ’’ ಎಂದು ದುಃಖ ತೋಡಿಕೊಂಡಿದ್ದಾರೆ. ನಿರ್ಮಾಪಕ ಗುರು ದೇಶಪಾಂಡೆ ಭೇಟಿಯ ನಂತರ ಅವರು ಹೇಳಿಕೆ ನೀಡಿದ್ದಾರೆ. ಚಿತ್ರೀಕರಣದ ವೇಳೆ ನನ್ನ ಮಗ ಮೃತಪಟ್ಟಿದ್ದು ಅನ್ಯಾಯ ಎಂದಿರುವ ಅವರು, ‘‘ಈಗ ನನ್ನ ಚಿಕ್ಕ ಮಗನನ್ನು ಓದಿಸುವುದಾಗಿ ನಿರ್ಮಾಪಕರು ಭರವಸೆ ನೀಡಿದ್ದಾರೆ, ನೋಡಬೇಕು’’ ಎಂದು ಹೇಳಿದ್ದಾರೆ.
****