ಮುಖ್ಯ ರಸ್ತೆಗೆ ಪುನೀತ್ ಹೆಸರಿಟ್ಟ ಶಿವಮೊಗ್ಗ ಜನತೆ..

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಾಮಾಜಿಕ ಸೇವೆಗಳು,ಅವರ ಅಭಿನಯ ಮತ್ತು ಕನ್ನಡ ಚಿತ್ರೋದ್ಯಮಕ್ಕೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪುನೀತ್ ರಾಜಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಇದರ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ಪುನೀತ್ ಅಭಿಮಾನಿಗಳು ಅವರ ಗೌರವಾರ್ಥ ಮುಖ್ಯ ರಸ್ತೆಗೆ ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡುವ ಮೂಲಕ ಪುನೀತ್ ಗೆ ಗೌರವ ಸಮರ್ಪಿಸಿದ್ದಾರೆ. ಶಿವಮೊಗ್ಗದ ಮುಖ್ಯ ರಸ್ತೆಯಾದ ಚಾನೆಲ್ ಏರಿ ರಸ್ತೆಯನ್ನು ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡಿದ್ದಾರೆ.

ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದಿಂದಾಗಿ ಇಡೀ ಕರುನಾಡಿಗೆ ಕರುನಾಡೆ ಮರುಕ ಪಟ್ಟಿದೆ, ಸಂಕಟ ಪಟ್ಟಿದೆ ಯಾಕೆ ಹೀಗಾಯಿತಲ್ಲಾ ಎಂದು ಚಿಂತೆ ಮಾಡುತ್ತಿದೆ. ಇಂದು (ನ 2) ದೊಡ್ಮನೆ ಕುಟುಂಬವು ಪುನೀತ್ ಸಮಾಧಿಗೆ ಹಾಲು ತುಪ್ಪ ದ ಕಾರ್ಯವನ್ನು ನೆರೆವೇರಿಸಲಿದ್ದಾರೆ. ಕಂಠೀರವ ಸ್ಟುಡಿಯೋ ಗೆ ಇನ್ನು ಸಾರ್ವಜನಿಕರ ಪ್ರವೇಶವನ್ನು ನಿರ್ಭಂದಿಸಲಾಗಿದೆ.
****