ಮುಂದಿನ ವರ್ಷ ಸೆಟ್ಟೇರಲಿದೆ.. ಪುನೀತ್ – ಸಂತೋಷ್ ಆನಂದರಾಮ್ ಸಿನಿಮಾ..

ರಾಜಕುಮಾರ ಮತ್ತು ಯುವರತ್ನ ಚಿತ್ರದ ಬಳಿಕ ಆನಂದ್ ರಾಮ್ ಯಾವ ಸಿನಿಮಾ ಮಾಡ್ತಾರೆ ಎಂದು ಸಿನಿ ಪ್ರೇಕ್ಷಕರು ಯೋಚಿಸುತ್ತಿರುವಾಗಲೇ ಮಹತ್ವದ ಮಾಹಿತಿಯೊಂದು ಹೊರ ಬಿದ್ದಿದೆ.
ಯುವರತ್ನ ಬಳಿಕ ಆನಂದ್ ರಾಮ್ ಅವರ ಮುಂದಿನ ಸಿನಿಮಾದ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು, ಅವರ ಮುಂದಿನ ಸಿನಿಮಾ ಯಾರ ಜೊತೆ ಎನ್ನುವ ಪ್ರಶ್ನೆ ಮೂಡಿತ್ತು, ಅದಕ್ಕೀಗ ಉತ್ತರ ಸಿಕ್ಕಿದೆ. ಆನಂದ್ ರಾಮ್ ಮುಂದಿನ ಸಿನಿಮಾ ಪುನೀತ್ ರಾಜ್ ಕುಮಾರ್ ಜೊತೆ ಮಾಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ಇಂದು ಸಂಜೆ ತಮ್ಮ ಹೊಸ ಸಿನಿಮಾದ ಬಗ್ಗೆ ಮಾಹಿತಿ ನೀಡಿರುವ ಅವರು, ನನ್ನ ಹಾಗೂ ಅಪ್ಪು ಅವರ ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆ ಎಂದು ತಿಳಿಸಿದ್ದಾರೆ.
ಇಬ್ಬರ ಕಾಂಬಿನೇಶನ್ ನಲ್ಲಿ ರಾಜಕುಮಾರ ಮತ್ತು ಯುವರತ್ನ ಸ್ಯಾಂಡಲ್ ವುಡ್ ಅಲ್ಲಿ ಸಕತ್ ಸೌಂಡ್ ಮಾಡಿದ್ದವು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದ್ದವು.ಈಗ ಮತ್ತೆ ಇದೇ ಜೋಡಿ ಹ್ಯಾಟ್ರಿಕ್ ಬಾರಿಸಲು ಮುಂದಾಗಿದೆ ಇಬ್ಬರ ಬಗ್ಗೆ ಸಿನಿ ಪ್ರೇಕ್ಷಕರು ಬಾರಿ ನಿರೀಕ್ಷೆ ಹೊಂದಿದ್ದಾರೆ.
****