‘ಮಾರ್ಟಿನ್’ ಅದ್ಧೂರಿ ಮುಹೂರ್ತ..! ‘ಆ್ಯಕ್ಷನ್ ಪ್ರಿನ್ಸ್’ಗೆ ಮತ್ತೆ ಆ್ಯಕ್ಷನ್ ಕಟ್ ಹೇಳುತ್ತಿರುವ ಎಪಿ ಅರ್ಜುನ್ ..!

ಅದ್ಧೂರಿ ಚಿತ್ರದ ಮೂಲಕ ಅದ್ಧೂರಿಯಾಗೇ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಮಾಡಿದವರು ನಟ ಧ್ರುವ ಸರ್ಜಾ. ನಂತರ ಬಹದ್ದೂರ್, ಭರ್ಜರಿ, ಪೊಗರು ಹೀಗೆ ಒಂಭತ್ತು ವರ್ಷಗಳಲ್ಲಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲವೂ ಹಿಟ್, ಸೂಪರ್‍ಹಿಟ್ ಲಿಸ್ಟ್ ಸೇರಿರುವ ಚಿತ್ರಗಳೇ. ಹೀಗಾಗಿಯೇ ಇವತ್ತು ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ಸ್ಯಾಂಡಲ್‍ವುಡ್‍ನ ಕೆಲವೇ ಸೂಪರ್ಸ್ಟಾರ್ ಸಾಲಿನಲ್ಲಿ ನಿಲ್ಲುತ್ತಾರೆ ಧ್ರುವ ಸರ್ಜಾ. ಇಂತಹ ಧ್ರುವ ಸರ್ಜಾ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಅವರ ಅಭಿಮಾನಿಗಳನ್ನು ಕಾಡುತ್ತಲೇಯಿತ್ತು. ಅದಕ್ಕೆ ನಿನ್ನೆ ಉತ್ತರ ದೊರೆತಿದೆ. ಮೊದಲ ಚಿತ್ರ ಅದ್ಧೂರಿಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಎಪಿ ಅರ್ಜುನ್ ಮತ್ತು ಧ್ರುವ ಸರ್ಜಾ ಮತ್ತೆ ಒಂದಾಗಿದ್ದು, ಮಾರ್ಟಿನ್ ಎಂಬ ಆಕ್ಷನ್ ಥ್ರಿಲ್ಲರ್ ಅನ್ನು ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ.

ಆಗಸ್ಟ್ 15ರ 75ನೇ ಸ್ವಾತಂತ್ರ್ಯ ದಿನಾಚರಣೆಯ ಸುಸಂದರ್ಭದಲ್ಲಿ ಮಾರ್ಟಿನ್ ಮುಹೂರ್ತ ನೆರವೇರಿದ್ದು, ಇದೇ ಆಗಸ್ಟ್ 18ರಿಂದ ಚಿತ್ರೀಕರಣ ನಡೆಯಲಿದೆ. ಈಗಾಗಲೇ ಸೆಟ್ ನಿರ್ಮಾಣದ ಕೆಲಸಗಳು ನಡೆಯುತ್ತಿದ್ದು ಏಕಕಾಲದಲ್ಲೇ ಬೆಂಗಳೂರು ಹಾಗು ಹೈದರಾಬಾದ್‍ನಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ ನಿರ್ಮಾಪಕ ಉದಯ್ ಕೆ ಮೆಹ್ತಾ.
****