News

ಮತ್ತೆ ಬಂಧನ 2 ನಿರ್ದೇಶಿಸುತ್ತಿದ್ದಾರೆ ಎಸ್ ವಿ ಆರ್

ಮತ್ತೆ ಬಂಧನ 2 ನಿರ್ದೇಶಿಸುತ್ತಿದ್ದಾರೆ ಎಸ್ ವಿ ಆರ್
  • PublishedSeptember 21, 2021

1984 ರಲ್ಲಿ ಬಂಧನ  ಚಿತ್ರ ತೆರೆಗೆ ಬಂದಾಗ, ಅದು ನಟ ವಿಷ್ಣುವರ್ಧನ್ ಅವರ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲಾಯಿತು. ಈ ಚಿತ್ರದಲ್ಲಿ, ಹರೀಶ್  ಮತ್ತು ನಂದಿನಿ ಪಾತ್ರ ಎವರ್ ಗ್ರೀನ್, ಸಿನಿಮ ಅಭಿಮಾನಿಗಳ ಮನಸ್ಸಿಂದ ಎಂದಿಗೂ ಮರೆಯಾಗದ ಪಾತ್ರಗಳು. ವಿಷ್ಣುವರ್ಧನ್ ಮತ್ತು ಸುಹಾಸಿನಿ ಅವರ ಮನೋಜ್ಞ ಅಭಿನಯದ ಜೊತೆಗೆ ಚಿತ್ರಕಥೆ, ಹಾಡು , ಸಂಗೀತ ಎಲ್ಲವೂ ಚಿತ್ರದ ಪಲ್ಸ್ ಪಾಯಿಂಟ್ ಈ ಚಿತ್ರದಲ್ಲಿ ಜೈಜಗದೀಶ್ ಕೂಡ ನಟಿಸಿದ್ದರು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ  ಈ ಚಿತ್ರ ತೆರೆಗೆಬಂದಿತ್ತು.

ಮತ್ತೆ ಬಂಧನ 2 ನಿರ್ದೇಶಿಸುತ್ತಿದ್ದಾರೆ ಎಸ್ ವಿ ಆರ್

ಸ್ಯಾಂಡಲ್ ವುಡ್ ನಲ್ಲಿ ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿ, ನಿರ್ಮಾಪಕನಾಗಿಯೂ ಗುರುತಿಸಿಕೊಂಡಿರುವ ಅಣಜಿ ನಾಗರಾಜ್ ಅವರು ‘ಬಂಧನ 2’ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. 

ಬಂಧನ ಸೀಕ್ವೆಲ್ ಮಾಡುವುದು ನನ್ನ ಮೇಲೆ ಅತಿ ಹೆಚ್ಚು ಜವಾಬ್ದಾರಿಯಿದೆ,  ಬಂಧನ ಸಿನಿಮಾ ಉಷಾ ನವರತ್ನರಾಮ್ ಅವರ ಕಾದಂಬರಿ ಆಧಾರಿತ ಸಿನಿಮಾವಾಗಿದೆ. 1985 ರಲ್ಲಿ ಬಂಧನ ಉತ್ತಮ ಸಿನಿಮಾ ಎಂಬ ಕಾರಣಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿತ್ತು. ಕನ್ನಡ ಸಿನಿಮಾ ರಂಗದಲ್ಲಿ ಇದೊಂದು ಮೈಲಿಗಲ್ಲಾಗಿತ್ತು. ಅದಾದ ನಂತರ ತಮಿಳಿಗು ಸಿನಿಮಾ ರಿಮೇಕ್ ಆಗಿತ್ತು.

ಬಂಧನ 2 ಸಿನಿಮಾದಲ್ಲಿ ನಂದಿನಿ ಪಾತ್ರ ಮುಂದುವರಿಯಲಿದೆ, ನಾಯಕನಾಗಿ ಆದಿತ್ಯ ನಟಿಸುತ್ತಿದ್ದು, ಸುಹಾಸಿನಿ ಮತ್ತು ಜೈ ಜಗದೀಶ್ ಈ ಸಿನಿಮಾದಲ್ಲಿಯೂ ಅಭಿನಯಿಸಲಿದ್ದಾರೆ. ಉಳಿದ ಪಾತ್ರವರ್ಗವನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *