ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದ ‘ಪುಕ್ಸಟ್ಟೆ ಲೈಫು’ ಲಿರಿಕಲ್ ಸಾಂಗ್ ‘ಖಾಲಿ ಖಾಲಿಯಾಗಿದೆ’

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಭಿನಯದ ಪುಕ್ಸಟ್ಟೆ ಲೈಫು ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರ ಬಿಡುಗಡೆಯ ನಿರೀಕ್ಷೆಯಲ್ಲಿರು ಸಂಚಾರಿ ವಿಜಯ್ ಅಭಿಮಾನಿಗಳಿಗೆ ಚಿತ್ರತಂಡ ಮತ್ತೊಂದು ಸಾಂಗ್ ರಿಲೀಸ್ ಮಾಡುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಪುಕ್ಸಟ್ಟೆ ಲೈಫು ಚಿತ್ರದ ಖಾಲಿ ಖಾಲಿಯಾಗಿದೆ ಎನ್ನುವ ಲಿರಿಕಲ್ ಹಾಡು ಇಂದು ಬಿಡುಗಡೆಯಾಗಿದ್ದು, ಒಂದೊಳ್ಳೆ ಮೀನಿಂಗ್ ಫುಲ್ ಹಾಡಿಗೆ ಕೇಳುಗರು ತಲೆದೂಗಿದ್ದಾರೆ. ಕೆ. ಕಲ್ಯಾಣ್ ಅವರ ಸಾಹಿತ್ಯದಲ್ಲಿ ಮೂಡಿಬಂದ ಖಾಲಿ ಖಾಲಿಯಾಗಿದೆ ಹಾಡಿಗೆ ವಾಸು ದೀಕ್ಷಿತ್ ಸಂಗೀತ ಸಂಯೋಜನೆ ಮಾಡಿದ್ದು, ಜನಪದ ಗಾಯಕಿ ಶಿಲ್ಪಾ ಮುಡ್ಬಿ ಧ್ವನಿಯಾಗಿದ್ದಾರೆ. ಸದ್ಯ ಈ ಹಾಡು ಸಖತ್ ವೈರಲ್ ಆಗುತ್ತಿದ್ದು, ಶಿಲ್ಪಾ ಮುಡ್ಬಿ ವಾಯ್ಸ್ಗೆ ಸಿನಿ ಪ್ರಿಯರು ಫಿದಾ ಆಗಿದ್ದಾರೆ.
ಪುರಸೊತ್ತೆ ಇಲ್ಲಾ ಎನ್ನುವ ಟ್ಯಾಗ್ಲೈನ್ನಲ್ಲಿ ಬರುತ್ತಿರುವ ಪುಕ್ಸಟ್ಟೆ ಲೈಫು ಚಿತ್ರಕ್ಕೆ ಅರವಿಂದ್ ಕುಂಪ್ಲಿಕತ್ ಆಯಕ್ಷನ್ ಕಟ್ ಹೇಳಿದ್ದು, ಸರ್ವಸ್ವ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಚಿತ್ರದ ಅದ್ಧೂರಿಯಾಗಿ ನಿರ್ಮಾಣಗೊಂಡಿದೆ. ಸೆಪ್ಟೆಂಬರ್ 24ರಂದು ಚಿತ್ರ ತೆರೆ ಕಾಣಲಿದೆ.
****