News

ಭಜರಂಗಿ 2 ಹಬ್ಬ ‘ಮಾರಿ ಹಬ್ಬ’ದಂತೆ ಫೀಲ್ ಆಗ್ತಿದೆ ನಿರ್ದೇಶಕ ಮಹೇಶ್ ಕುಮಾರ್

ಭಜರಂಗಿ 2 ಹಬ್ಬ ‘ಮಾರಿ ಹಬ್ಬ’ದಂತೆ ಫೀಲ್ ಆಗ್ತಿದೆ ನಿರ್ದೇಶಕ ಮಹೇಶ್ ಕುಮಾರ್
  • PublishedOctober 29, 2021

ಕೊರೊನಾ ನಂತರ ಬಿಡುಗಡೆ ಆಗುತ್ತಿರುವ 3ನೇ ಬಿಗ್ ಬಜೆಟ್ ಚಿತ್ರಗಳಲ್ಲಿ ಒಂದಾದ ಭಜರಂಗಿ 2 ಇಂದು ಮುಂಜಾನೆ (ಅ29) ರಿಲೀಸ್ ಆಗಿ ಗುಡ್ ಓಪನಿಂಗ್ ಪಡೆದಿದೆ. ಇಡೀ ರಾತ್ರಿ ಚಿತ್ರಮಂದಿರಗಳ ಮುಂದೆ ಶಿವಣ್ಣ ಅಭಿಮಾನಿಗಳು ಕಾಯ್ದು ಫ್ಯಾನ್ಸ್ ಶೋ ವೀಕ್ಷಿಸಿ ಸಂಭ್ರಮಿಸಿದ್ದಾರೆ.

ಸ್ಯಾಂಡಲ್ ವುಡ್ ನ ಭರವಸೆಯ ನಿರ್ದೇಶಕರಾದ ಎಸ್. ಮಹೇಶ್ ಕುಮಾರ್ ಅವರು ಕೂಡ ಬೆಳ್ಳಂ ಬೆಳಗ್ಗೆ 5 ಗಂಟೆಗೆ ಚಿತ್ರಮಂದಿರಕ್ಕೆ ಬಂದು ಶಿವಣ್ಣನ ಅಭಿಮಾನಿಯಾಗಿ ಸಿನಿಮಾವನ್ನ ವೀಕ್ಷಿಸಿದ್ದಾರೆ, ಇಂತಾಹದೊಂದು ಗ್ರಾಂಡ್ ಓಪನಿಂಗ್ ಸ್ಯಾಂಡಲ್ ವುಡ್ ಗೆ  ಅವಶ್ಯಕವಾಗಿತ್ತು. ಇಂತಹ ಓಪನಿಂಗ್ ಸಿಗುತ್ತೆ ಎಂಬ ನಂಬಿಕೆ ಯಾರಿಗೂ ಇರಲಿಲ್ಲಾ, ಆದರೆ ಶಿವಣ್ಣ ಅಭಿಮಾನಿಗಳು ಅದನ್ನ ಸಾಧ್ಯವಾಗಿಸಿದ್ದಾರೆ.ಅಭಿಮಾನಿಗಳ ಸಂಭ್ರಮ ನೋಡ್ತಿದ್ರೆ ಮಾರಿ ಹಬ್ಬ ದ ರೀತಿ ಅನ್ನಸ್ತಿದೆ ಮುಂದೆ ಬರುವ ಎಲ್ಲಾ ಚಿತ್ರಗಳಿಗೂ ಇಂತಹದೇ ರೆಸ್ಪಾನ್ಸ್ ಸಿಕ್ಕರೆ ಇನ್ನಷ್ಟು ಉತ್ತಮ ಚಿತ್ರಗಳು ಪ್ರೇಕ್ಷಕರ ಮುಂದೆ ಬರುತ್ತವೆ ಎಂದರು.

ಎಸ್.ಮಹೇಶ್ ಕುಮಾರ್ ನಿರ್ದೇಶನದ ಮದಗಜ ಚಿತ್ರ ಈಗಾಗಲೇ ಬಿಡುಗಡೆಗೆ ಸಿದ್ದವಾಗಿದ್ದು ಟ್ರೈಲರ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

Written By
Kannadapichhar

Leave a Reply

Your email address will not be published. Required fields are marked *