News

ಭಜರಂಗಿ 2 ಪೋಸ್ಟರ್ ರಿಲೀಸ್ ಶೃತಿಯ ಡಿಫರೆಂಟ್ ಲುಕ್ ಗೆ ಅಭಿಮಾನಿಗಳು ಶಾಕ್..!

ಭಜರಂಗಿ 2 ಪೋಸ್ಟರ್ ರಿಲೀಸ್ ಶೃತಿಯ ಡಿಫರೆಂಟ್ ಲುಕ್ ಗೆ ಅಭಿಮಾನಿಗಳು ಶಾಕ್..!
  • PublishedSeptember 18, 2021

ಕನ್ನಡ ಚಿತ್ರರಂಗದಲ್ಲಿ ನಾಯಕಿಯ ಅಳುವ ಪಾತ್ರಗಳಿಗೆ ಅನ್ವರ್ಥನಾಮ ಎಂದರೆ ತಟ್ಟನೆ ನೆನಪಾಗುವುದು ಶೃತಿ ಹೆಸರು. ಕೆಲವು ಹೆಣ್ಣು ಮಕ್ಕಳು ಅಳಲೆಂದೆ ಶೃತಿ ಅಭಿನಯದ ಚಿತ್ರಗಳನ್ನು ನೋಡಲು ಥಿಯೇಟರ್ ಗೆ ಬರುತ್ತಿದ್ದ ಕಾಲವೊಂದಿತ್ತು. ಈಗ ಕಾಲ ಬದಲಾಗಿದೆ ಶೃತಿ ಅಳುವ ಪಾತ್ರಗಳನ್ನು ಬಿಟ್ಟು ನಗಿಸುವ ಹಾಸ್ಯ ಪಾತ್ರಗಳಿಗೆ ಹೊರಳಿದ್ದರು, ರಾಮ ಶಾಮ ಬಾಮ, ಕಲ್ಪನಾ, ಚಿತ್ರಗಳು ಇದಕ್ಕೆ ಉದಾಹರಣೆ ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಲೇಡಿ ರೌಡಿ ಲುಕ್ ನಲ್ಲಿ ಕಾಣೀಸಿಕೊಂಡಿದ್ದಾರೆ.

ಭಜರಂಗಿ 2 ಚಿತ್ರದಲ್ಲಿನ ನಟನೆಯ ಪೋಸ್ಟರ್ ಬಿಡುಗಡೆಯಾಗಿದ್ದು ಅದರಲ್ಲಿ ಶೃತಿ ಅವತಾರ ಕಂಡು ಸ್ಯಾಂಡಲ್ ವುಡ್ ಮಂದಿ ಒಂದುಕ್ಷಣ ದಂಗಾಗಿದ್ದಾರೆ. ಸದಾ ಅಳುಮೊಗದ ಪಾತ್ರಗಳಿಂದಲೇ ಜನಪ್ರಿಯತೆ ಪಡೆದಿದ್ದ ನಟಿ ಶೃತಿ ಇದೇ ಮೊದಲಬಾರಿಗೆ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೈಯಲ್ಲಿ ಚುಟ್ಟಾ ಹಿಡ್ಕೊಂಡು, ಉದ್ದನೆಯ ಕೂದಲು ಬಿಟ್ಟು, ಮಾರಿಮುತ್ತು ಸ್ಟೈಲ್ ನಲ್ಲಿ ಸಿಂಹಾಸನದ ಮೇಲೆ‌ ಕೂತು ಪೋಸ್ ಕೊಟ್ಟಿರುವ ಶೃತಿಯನ್ನು ನೋಡಿ ಶಾಕ್ ಆಗಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ, ಹರ್ಷ ನಿರ್ದೇಶನದ ಭಜರಂಗಿ 2 ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಇನ್ನೇನು ರಿಲೀಸ್ ಆಗಬೇಕಿದೆ. ಜಯಣ್ಣ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ.

Written By
Kannadapichhar

Leave a Reply

Your email address will not be published. Required fields are marked *