News

ಭಜರಂಗಿ 2 ಚಿತ್ರಮಂದಿರಗಳ ಬಳಿ ದೀಪಾವಳಿ , ಅಭಿಮಾನಿಗಳ ಹರ್ಷೋದ್ಘಾರ

ಭಜರಂಗಿ 2 ಚಿತ್ರಮಂದಿರಗಳ ಬಳಿ ದೀಪಾವಳಿ , ಅಭಿಮಾನಿಗಳ ಹರ್ಷೋದ್ಘಾರ
  • PublishedOctober 29, 2021

ಥಿಯೇಟರ್ ಗಳ ಎದುರು ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ‘ಭಜರಂಗಿ-2’ ಪ್ರದರ್ಶನ ಆರಂಭವಾಗಿದೆ. ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ, ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಸೂರ್ಯೋದಯಕ್ಕೆ ಮೊದಲೇ ‘ಭಜರಂಗಿ 2’ ದರ್ಶನವಾಗಿದೆ. ಥಿಯೇಟರ್ಗಳ ಮುಂದೆ ಹಬ್ಬದ ವಾತಾವರಣ ಕಂಡು ಬಂದಿದ್ದು, ದೀಪಾವಳಿಗೆ ಮೊದಲು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಚಿತ್ರಮಂದಿರಗಳು ಹೌಸ್​ಫುಲ್ ಆಗಿವೆ. ಅಭಿಮಾನಿಗಳು ಸಂಭ್ರಮದಿಂದ ನೆಚ್ಚಿನ ನಟನ ಚಿತ್ರವನ್ನು ಸ್ವಾಗತಿಸಲು ತಯಾರಿ ನಡೆಸಿದ್ದಾರೆ. ಚಿತ್ರದ ಫಸ್ಟ್ ಹಾಫ್ ಸೂಪರ್ ಎಂಬ ಮಾಹಿತಿಯೂ ಬಂದಿದೆ. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ 1,000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಭಜರಂಗಿ 2 ಚಿತ್ರವನ್ನು ‘ಜಯಣ್ಣ ಫಿಲ್ಮ್ಸ್’ ಬ್ಯಾನರ್​ನಲ್ಲಿ ನಿರ್ಮಿಸಲಾಗಿದ್ದು, ಎ.ಹರ್ಷ ನಿರ್ದೇಶಿಸಿದ್ದಾರೆ. ಶಿವರಾಜ್ ಕುಮಾರ್ ಹಾಗೂ ಹರ್ಷ ಕಾಂಬಿನೇಷನ್​ನಲ್ಲಿ ಮುಡಿಬರುತ್ತಿರುವ ಮೂರನೇ ಚಿತ್ರ ಇದಾಗಿದೆ. ಹಿರಿಯ ನಟಿ ಶ್ರುತಿ, ಭಜರಂಗಿ ಲೋಕಿ, ಭಾವನಾ ಮೆನನ್​, ಶಿವರಾಜ್​ ಕೆ.ಆರ್​. ಪೇಟೆ, ಚೆಲುವ ರಾಜು ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ನೀಡಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್​. ಕುಮಾರ್​ ಸಂಕಲನ ಚಿತ್ರಕ್ಕಿದೆ.

ಜೆ.ಪಿ.ನಗರದ ಸಿದ್ದೇಶ್ವರ, ಶ್ರೀನಿವಾಸ, ಅಭಿಮಾನ್ ಮೊದಲಾದ ಚಿತ್ರಮಂದಿರಲ್ಲಿ 5 ಗಂಟೆಗೆ ಫ್ಯಾನ್ಸ್ ಶೋ ಶುರುವಾಗಿದ್ದು ಶೋ ನೋಡಲು ಮಹಿಳಾ ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಥಿಯೇಟರ್ ಗಳ ಎದುರು ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ.

Written By
Kannadapichhar

Leave a Reply

Your email address will not be published. Required fields are marked *