News

ಭಜರಂಗಿ 2 ಆರಕನ ಭಯ ಹುಟ್ಟಿಸುವ ಪೋಸ್ಟರ್..! ಬುಧವಾರ (ಅ.20) ಟ್ರೇಲರ್ ಬಿಡುಗಡೆ

ಭಜರಂಗಿ 2 ಆರಕನ ಭಯ ಹುಟ್ಟಿಸುವ ಪೋಸ್ಟರ್..! ಬುಧವಾರ (ಅ.20) ಟ್ರೇಲರ್ ಬಿಡುಗಡೆ
  • PublishedOctober 19, 2021

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಎ ಹರ್ಶ ಕಾಂಬಿನೇಷನ್ ಭಜರಂಗಿ 2’ ಚಿತ್ರದ ಟೀಸರ್​ ಮತ್ತು ಪೋಸ್ಟರ್​ಗಳು ಭಾರಿ ಹೈಪ್​ ಸೃಷ್ಟಿಸಿವೆ. ಅ.29ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಬುಧವಾರ (ಅ.20) ಟ್ರೇಲರ್​​ ಬಿಡುಗಡೆಗೆ ದಿನಾಂಕ ನಿಗದಿ ಮಾಡಲಾಗಿದೆ. ಸೂಪರ್​ ನ್ಯಾಚುರಲ್​ ಅಂಶಗಳನ್ನು ಹೊಂದಿರುವ ಈ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದರ ಝಲಕ್​ ಅನ್ನು ಈ ಟ್ರೇಲರ್​ನಲ್ಲಿ ತೋರಿಸಲಾಗುವುದು. ಅದಕ್ಕೂ ಮುನ್ನ ಈ ಚಿತ್ರದ ವಿಲನ್​ ಆರಕ ಪೋಸ್ಟರ್​ ಸಖತ್​ ಗಮನ ಸೆಳೆಯುತ್ತಿದೆ.

ನಾಯಕ ನಟ ಶಿವರಾಜ್​ಕುಮಾರ್​, ನಾಯಕಿ ಭಾವನಾ ಮೆನನ್​ ಮಾತ್ರವಲ್ಲದೇ ಎಲ್ಲ ಪಾತ್ರಗಳ ಪೋಸ್ಟರ್​ಗಳನ್ನು ತುಂಬ ಚೆನ್ನಾಗಿ ವಿನ್ಯಾಸಗೊಳಿಸಲಾಗಿದೆ. ಕೆಲವೇ ದಿನಗಳ ಹಿಂದೆ ಹಿರಿಯ ನಟಿ ಶ್ರುತಿ, ಖಳನಟ ಲೋಕಿ ಅವರ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೋರ್ವ ಖಳನಟ ಚೆಲುವರಾಜು ಅವರ ಪೋಸ್ಟರ್​ ಹೊರಬಂದಿದೆ. ಟ್ರೇಲರ್​ ಬಿಡುಗಡೆಗೂ ಒಂದು ದಿನ ಮುನ್ನ ‘ಭಜರಂಗಿ 2’ ಚಿತ್ರತಂಡ ಈ ​ಪೋಸ್ಟರ್​ ಹಂಚಿಕೊಂಡಿದೆ. ಇದರಲ್ಲಿ ವಿಲನ್​ ಆರಕ ಅಬ್ಬರಿಸಿದ್ದಾನೆ. ಅದನ್ನು ನೋಡಿದರೆ ಸಿನಿಪ್ರಿಯರ ಕೌತುಕ ಡಬಲ್​ ಆಗುವುದರಲ್ಲಿ ಸಂಶಯವಿಲ್ಲ.

ಬುಧವಾರ (ಅ.20) ಸಂಜೆ 6.45ಕ್ಕೆ ಟ್ರೇಲರ್​ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್​. ಕುಮಾರ್​ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

Written By
Kannadapichhar

Leave a Reply

Your email address will not be published. Required fields are marked *