News

ಫೈಟರ್ ವಿವೇಕ್ ತಾಯಿಗೆ 1 ಲಕ್ಷ ಚೆಕ್ ಕೊಟ್ಟ KGF ಫೈಟ್ ಮಾಸ್ಟರ್..

  • PublishedAugust 12, 2021

‘ಲವ್ ಯ್ಯೂ ರಚ್ಚು’ ಚಿತ್ರದ ಚಿತ್ರೀಕರಣದ ವೇಳೆ ಸಂಭವಿಸಿದ ವಿದ್ಯುತ್ ಅವಘಡದಿಂದಾಗಿ ಮೃತಪಟ್ಟ ಫೈಟರ್ ವಿವೇಕ್ ಮನೆಗೆ ಭೇಟಿ ನೀಡಿ ವಿವೇಕ್ ತಾಯಿಗೆ ಸಾಂತ್ವನ ಹೇಳಿ 1 ಲಕ್ಷ ರೂ ಚೆಕ್ ನೀಡುವ ಮೂಲಕ ವಿಕ್ರಂ ಮೋರ್, ಫೈಟ್ ಮಾಸ್ಟರ್ ಮೃತ ವಿವೇಕ್ ಕುಟುಂಬಕ್ಕೆ  ಆಸರೆಯಾಗಿದ್ದಾರೆ.


ಮೃತ ವಿವೇಕ್ ತಾಯಿ

ಬಳಿಕ ಮಾತನಾಡಿದ ವಿಕ್ರಮ್ ಮಾಸ್ಟರ್, ”ವಿವೇಕ್‌ ಸಾವು ವೈಯಕ್ತಿಕವಾಗಿ ನೋವು ತಂದಿದೆ. ಸದ್ಯಕ್ಕೆ ಈ ಘಟನೆ ಬಗ್ಗೆ ಹೆಚ್ಚು ಏನು ಹೇಳಲು ಸಾಧ್ಯವಿಲ್ಲ. ವಿನೋದ್ ಮಾಸ್ಟರ್ ಹೊಸಬರಲ್ಲ, ಕೆಡಿ ವೆಂಕಟೇಶ್, ಥ್ರಿಲ್ಲರ್ ಮಂಜು, ರವಿವರ್ಮ ಅಂತಹ ಹಿರಿಯರ ಬಳಿ ಕೆಲಸ ಮಾಡಿದವರು. ಸಣ್ಣ ಆಕ್ಷನ್ ದೃಶ್ಯ ಮಾಡಬೇಕಾದರೂ ಸಹ ಸುರಕ್ಷತೆ ಬಗ್ಗೆ ಮುಂಜಾಗ್ರತೆ ವಹಿಸುವ ವ್ಯಕ್ತಿತ್ವ. ಮೊನ್ನೆ ನಡೆದ ಘಟನೆಯಲ್ಲಿ ಅದು ಪ್ಯಾಚ್ ವರ್ಕ್ ಕೆಲಸ ಆಗ್ತಿದ್ದರಿಂದ ಮಾಸ್ಟರ್ ಪೂರ್ತಿ ಗಮನ ಅಲ್ಲಿ ಕೊಟ್ಟಿರಲ್ಲ ಎಂದೆನಿಸುತ್ತಿದೆ” ಎಂದು ಪ್ರತಿಕ್ರಿಯಿಸಿದರು.

****

Written By
Kannadapichhar

Leave a Reply

Your email address will not be published. Required fields are marked *