ಫುಲ್ ಹೈಪ್ ಕ್ರಿಯೇಟ್ ಮಾಡಿದ ಕಾಮನ್ ಮ್ಯಾನ್ ಬಡವ ರಾಸ್ಕಲ್ ಟ್ರೇಲರ್!
ಡಾಲಿ ಧನಂಜಯ ಅವರು ನಟನೆಯಬಡವ ರಾಸ್ಕಲ್ ಚಿತ್ರ ರಾಜ್ಯದಲ್ಲಿ ಈಗಾಗಲೆ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಇಂದು (ಡಿ.13) ಟ್ರೈಲರ್ ಲಾಂಚ್ ಮಾಡಲಾಗಿದೆ. ಧನಂಜಯ್ ನಟನೆಗಷ್ಟೆ ಸೀಮಿತವಾಗದೆ ಜೊತೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ‘ಬಡವ ರಾಸ್ಕಲ್’ ಸಿನಿಮಾ ನಿರ್ಮಾಣಮಾಡಿದ್ದಾರೆ. ಈ ಚಿತ್ರ ಕ್ರಿಸ್ಮಸ್ ಪ್ರಯುಕ್ತ ಡಿಸೆಂಬರ್ 24ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ ನಡೆದಿದೆ.
ಧನಂಜಯ ಈ ಸಿನಿಮಾದಲ್ಲಿ ಆಟೋ ಓಡಿಸೋ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಕಥಾ ನಾಯಕ ಗೆಳೆಯರಿಗಾಗಿ ಏನು ಮಾಡೋಕೂ ರೆಡಿ ಇರುತ್ತಾನೆ. ಇದು ಆತನನ್ನು ಪ್ರೀತಿಸುವ ಹುಡುಗಿಗೆ ಇಷ್ಟವಿಲ್ಲ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಗುತ್ತದೆ. ಇನ್ನು, ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯಗಳು ಇರಲಿವೆ ಎಂಬುದು ಟ್ರೇಲರ್ನಲ್ಲಿ ಹೈಲೈಟ್ ಆಗಿದೆ. ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ 20 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಟ್ರೇಲರ್ ಪಡೆದುಕೊಂಡಿದೆ. ಇನ್ನು, ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಮಿಂಚಿದ್ದಾರೆ.
****