News

‘ಪ್ರೇಮಂ ಪೂಜ್ಯಂ’ ಸಿನಿಮಾ ಪ್ರಚಾರದ ವೇಳೆ ಪುನೀತ್ ಅವರನ್ನು ಸ್ಮರಿಸಿದ ನಟ ಪ್ರೇಮ್!

‘ಪ್ರೇಮಂ ಪೂಜ್ಯಂ’ ಸಿನಿಮಾ ಪ್ರಚಾರದ ವೇಳೆ ಪುನೀತ್ ಅವರನ್ನು ಸ್ಮರಿಸಿದ ನಟ ಪ್ರೇಮ್!
  • PublishedNovember 7, 2021

ಲವ್ಲಿ ಸ್ಟಾರ್ ಪ್ರೇಮ್‌ ನಟನೆಯ 25ನೇ ಚಿತ್ರ, ಡಾ.ರಾಘವೇಂದ್ರ ನಿರ್ದೇಶನದ ಮೊದಲ ಚಿತ್ರ ‘ಪ್ರೇಮಂ ಪೂಜ್ಯಂ’ ನ.12ರಂದು ದೇಶ ವಿದೇಶಗಳಲ್ಲಿ ರಿಲೀಸ್‌ ಆಗುತ್ತಿದೆ. ಚಿತ್ರದ ಪ್ರಚಾರ ಕಾರ್ಯವನ್ನು ಚಿತ್ರ ತಂಡ ಈಗಾಗಲೇ ಪ್ರಾರಂಭಿಸಿದ್ದು ರಾಜ್ಯದ ಹಲವಾರು ಜಿಲ್ಲೆಗಳಿಗೆ ಭೇಟಿ ನೀಡಿ ಚಿತ್ರದ ಪ್ರಚಾರ ಮಾಡುತ್ತಿದೆ. ಈ ವೇಳೆ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೇಮ್ ಇತ್ತೀಚೆಗೆ ನಿಧನರಾದ ಪುಣಿತ್ ರಾಜಕುಮಾರ್ ಅವರನ್ನು ಸ್ಮರಿಸಿದರು.

ನಟ ಪುನೀತ್ ರಾಜ್​ಕುಮಾರ್​​ ಅವರಿಗೆ ಆದಷ್ಟು ಬೇಗ ಪದ್ಮಶ್ರೀ ಕೊಡಲಿ ಎಂದು ನಟ ಪ್ರೇಮ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪುನೀತ್ ಸರ್​​ ಗೆ ಪದ್ಮಶ್ರೀ ಕೊಡಬೇಕೆಂದು ನಾನು ಬಯಸುತ್ತೇನೆ. ಸಾಧ್ಯವಾದಷ್ಟು ಬೇಗ ಕೊಡಲಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು. 50-60 ವರ್ಷ ಮೇಲ್ಪಟ್ಟವರು ಜಿಮ್ ಸ್ವಲ್ಪ ಕಡಿಮೆ ಮಾಡಲಿ. ಭಾರ ಎತ್ತುವುದನ್ನು ಕಡಿಮೆ‌ ಮಾಡಲಿ. ಜಿಮ್ ಮಾಡಬೇಕೆಂಬ ಆಸೆ ಇದ್ರೆ ಒಳ್ಳೆ ಟ್ರೈನರ್ ಸಲಹೆ ತೆಗೆದುಕೊಳ್ಳಲಿ. ಫಿಟ್​​ ಇರಬೇಕಂದ್ರೆ ಜಿಮ್ ಮಾಡಲೇಬೇಕು, ಇಲ್ಲ ಬೇರೆ ಆ್ಯಕ್ಟಿವ್​ ಇರಬೇಕು. ಆರೋಗ್ಯವಾಗಿರಲಿ, ಆದ್ರೆ 50 ವರ್ಷದ ಬಳಿಕ ಎಚ್ಚರದಿಂದಿರಲಿ ಎಂದು ಇದೇ ವೇಳೆ ಪ್ರೇಮ್​ ಸಲಹೆ ಕೊಟ್ಟರು. ‘ಪ್ರೇಮಂ ಪೂಜ್ಯಂ’ ಚಿತ್ರದ ಪ್ರಮೋಷನ್‌ ಕಾರ್ಯ ಮತ್ತೆ ಪ್ರಾರಂಭವಾಗಿದ್ದು. ಇಡೀ ಕರ್ನಾಟಕದಾದ್ಯಂತ ಚಿತ್ರತಂಡ ಪ್ರವಾಸ ಮಾಡಿ ಪ್ರಚಾರ ಮಾಡುತ್ತಿದೆ.

****

Written By
Kannadapichhar

Leave a Reply

Your email address will not be published. Required fields are marked *