”ಪೆಳ್ಳಿಸಂದಡಿ” ಚಿತ್ರದ ಟ್ರೈಲರ್ ನಾಳೆ ರಿಲೀಸ್

‘ಪೆಳ್ಳಿಸಂದಡಿ’ ಚಿತ್ರದ ಟ್ರೈಲರ್ ಅನ್ನು ನಾಳೆ ಆದಿತ್ಯ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ಈ ಸಿನಿಮಾ ಟೀಸರ್ ಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ ಈ ಸಿನಿಮಾ ಟ್ರೈಲರ್ ಅನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಲಾಂಚ್ ಮಾಡಲಿದ್ದಾರೆ.
ಗೌರಿ ರೋಣಂಕಿ ಆಕ್ಷನ್ ಕಟ್ ಹೇಳಿದ್ದು, ರೋಷನ್ ಮೇಕಾ ನಾಯಕನಾಗಿ ‘ಕಿಸ್’ ಹಾಗೂ ‘ಭರಾಟೆ’ ಸಿನಿಮಾ ಖ್ಯಾತಿಯ ಶ್ರೀಲೀಲಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅರ್ಕಾ ಮೀಡಿಯಾ ವರ್ಕ್ಸ್ ಬ್ಯಾನರ್ ನಡಿ ಬಾಹುಬಲಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ.
****