‘ ಪುಷ್ಪ ‘ ಸಿನಿಮಾದಲ್ಲಿ ಫಹಾದ್ ಫಾಸಿಲ್ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

5 ಭಾಷೆಗಳಲ್ಲಿ ರೆಡಿ ಆಗ್ತಿರುವ ಆರ್ಯ ಚಿತ್ರ ನಂತರ ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಪುಷ್ಪ ಸಿನಿಮಾ ಬಹು ನಿರೀಕ್ಷೆ ಹುಟ್ಟಿಸಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಸುದ್ದಿ ಈಗಾಗಲೆ ಅನೌನ್ಸ್ ಮಾಡಿರುವ ಚಿತ್ರ ತಂಡ ಇಂದು ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರದ ಬಗ್ಗೆ ಮತ್ತಷ್ಟು ಕ್ರೇಜ್ ಹೆಚ್ಚುವಂತೆ ಮಾಡಿದೆ. ಅದೇನೆಂದರೆ

ಪುಷ್ಪ ಚಿತ್ರದಲ್ಲಿ ಮಲೆಯಾಳಂ ನ ಸೂಪರ್ ಸ್ಟಾರ್ ಫಹಾದ್ ಫಾಸಿಲ್ ಅವರು ಐಪಿಎಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಫಾಸಿಲ್ ಅವರು ಪುಷ್ಪ ಚಿತ್ರದಲ್ಲಿ ಭನ್ವರ್ ಸಿಂಗ್ ಶೇಖಾವತ್ (ಐಪಿಎಸ್) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಫಹಾದ್ ಫಾಸಿಲ್ ಅವರ ನೋಟ ಭಯ ಹುಟ್ಟಿಸುವಂತಿದೆ.
ಇತ್ತೀಚೆಗೆ ಡಾಲಿ ಧನಂಜಯ್ ಅವರ ಹುಟ್ಟಿದಹಬ್ಬದಂದು ಧನಂಜಯ್ ಅವರ ಪೋಸ್ಟರ್ ರಿಲೀಸ್ ಮಾಡಿದ್ದ ಚಿತ್ರ ತಂಡ ಜಾಲಿ ರೆಡ್ಡಿ ಪಾತ್ರದ ಕ್ಲೂ ಕೊಟ್ಟಿತ್ತು. ಈಗ ಫಾಸಿಲ್ ಅವರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುವ ಮೂಲಕ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ. ಪುಷ್ಪ ಬತ್ತಳಿಕೆಯಲ್ಲಿ ಇನ್ನೆಷ್ಟು ಅಸ್ತ್ರಗಳು ಅಡಗಿವೆಯೋ ಕಾದುನೋಡಬೇಕಿದೆ.
****