“ಪುನೀತ್” ಸ್ಮರಣೆ ಮಾಡಿದ ತೆಲುಗು ನಟ ರಾಮ್ ಚರಣ್
ತೆಲುಗು ನಟ ರಾಮ್ ಚರಣ್ ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನಿಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ನಂತರ ಮಾತನಾಡಿದ ಅವರು, ‘‘ಪುನೀತ್ ರಾಜ್‌ಕುಮಾರ್ ನಿಧನ ಅತಿ ದೊಡ್ಡ ನಷ್ಟ. ನಮ್ಮ ಕುಟುಂಬದ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಈಗಲೂ ಪುನೀತ್ ನಿಧನದ ಸುದ್ದಿ ನಂಬುವುದಕ್ಕೆ ಆಗುತ್ತಿಲ್ಲ. ನಮ್ಮ ಮನೆಗೆ ಬಂದಾಗ ತುಂಬಾ ಆತ್ಮೀಯವಾಗಿ ಇರುತ್ತಿದ್ದರು. ನಾವು ಅವರಿಗೆ ಗೆಸ್ಟ್ ಅನ್ನುವಂತೆ ನಮ್ಮ ಜತೆ ಇರುತ್ತಿದ್ದರು.

ಮಾನವೀಯ ಮೌಲ್ಯಗಳನ್ನು ಪುನೀತ್ ರಿಂದ ಕಲಿಯಬೇಕು. ವಿ ಲವ್ ಯು ಪುನೀತ್ ರಾಜ್‌ಕುಮಾರ್’’ ಎಂದು ರಾಮ್ ಚರಣ್ ನುಡಿದಿದ್ಧಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅವರು ಸಂತಾಪ ಸೂಚಿಸಿದ್ಧಾರೆ. ರಾಮ್ ಚರಣ್ ಶಿವರಾಜ್ ಕುಮಾರ್ ಅವರ ನಿವಾಸಕ್ಕೂ ತೆರಳಿ, ಸಾಂತ್ವನ ಹೇಳಿದ್ಧಾರೆ.
****