ಪುನೀತ್ ಸಮಾಧಿ ದರ್ಶನಕ್ಕೆ ಮೂರು ತಿಂಗಳ ಹಸುಗೂಸಿನೊಂದಿಗೆ ಬಂದ ತಾಯಿ!
ಪುನೀತ್ ಸಾವಿನ ಸುದ್ದಿಯನ್ನು ಕರುನಾಡಿನ ಜನ ಇನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ, ಅವರ ಅಂತಿಮ ದರ್ಶನಕ್ಕೆ ಸುಮಾರು 20 ಲಕ್ಷಕ್ಕು ಅಧಿಕ ಮಂದಿ ಪಾಲ್ಗೊಂಡಿದ್ದರು. ಈಗ ಪುನೀತ್ ತೀರಿಕೊಂಡು ಒಂದು ವಾರಕ್ಕು ಹೆಚ್ಚು ದಿನ ಕಳೆದರು ಅಭಿಮಾನಿಗಳ ನೋವೇನು ಕಡಿಮೆಯಾಗಿಲ್ಲಾ.
ಈ ವೇಳೆ ಅಪ್ಪು ಸಮಾಧಿಗೆ ಬೇಟಿ ನೀಡಿ ದರ್ಶನ ಪಡೆಯಲು 3 ತಿಂಗಳ ಹಸುಗೂಸನ್ನು ತೋಳಲ್ಲಿ ಮಲಗಿಸಿಕೊಂಡು ಬಾಣಂತಿಯೊಬ್ಬರು ಸರತಿ ಸಾಲಿನಲ್ಲಿ ನಿಂತು ಅಪ್ಪು ಸಮಾಧಿ ದರ್ಶನ ಪಡೆದ ಆ ತಾಯಿಯ ಪ್ರೀತಿಯ ಅಭಿಮಾನವನ್ನು ನೋಡಿದ್ರೆ ಅಪ್ಪು ಸಾವು ಅಭಿಮಾನಿಗಳಲ್ಲಿ ಯಾಕಿಷ್ಟು ನೋವು ತರಿಸಿದೆ ಎಂದು ಗೊತ್ತಾಗತ್ತೆ. ಪ್ರತಿ ದಿನ ಲಕ್ಷಾಂತರ ಜನರು ಬಂದು ಅಪ್ಪು ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಬೆಳ್ಳಂಬೆಳಗ್ಗೆಯೇ ಕಂಠೀರವ ಸ್ಟುಡಿಯೋ ಆವರಣದಲ್ಲಿ ಜನರು ಜಮಾಯಿಸುತ್ತಿದ್ದಾರೆ. ಸರದಿ ಸಾಲಿನಲ್ಲಿ ನಿಂತು ನೆಚ್ಚಿನ ನಟನ ಸಮಾಧಿಗೆ ಕೈ ಮುಗಿಯುತ್ತಿದ್ದಾರೆ. ಕಣ್ಣೀರು ಸುರಿಸಿ ಶ್ರದ್ಧಾಂಜಲಿ ಕೋರುತ್ತಿದ್ದಾರೆ.
ಅಪ್ಪು ಇಹಲೋಕ ತ್ಯಜಿಸಿ 9 ದಿನ ಕಳೆದರೂ ಕೂಡ ಇಂದಿಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಸಮಾಧಿ ದರ್ಶನಕ್ಕೆ ಮುಗಿ ಬೀಳುತ್ತಿದ್ದಾರೆ.ಅಪ್ಪು ಮೇಲೆ ಜನರು ಇಟ್ಟಿರುವ ಅಭಿಮಾನಕ್ಕೆ ಸಾಟಿಯೇ ಇಲ್ಲ. ಸಮಾಧಿ ಬಳಿ ಬರುತ್ತಿರುವ ಜನಸಾಗರವೇ ಈ ಮಾತಿಗೆ ಸಾಕ್ಷಿ. ಎಲ್ಲವೂ ಸುಸೂತ್ರವಾಗಿ ನಡೆಯಲಿ ಎಂದು 500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
****