News

ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ: ‘ರಾಜಕುಮಾರ’ ಸಿನಿಮಾದ ಫ್ರೀ ಶೋ

ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ: ‘ರಾಜಕುಮಾರ’ ಸಿನಿಮಾದ ಫ್ರೀ ಶೋ
  • PublishedNovember 1, 2021

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿ ಸೋಮವಾರ ಬೆಳಗ್ಗೆ ಅವರ ಯಶಸ್ವಿ ಚಿತ್ರ ‘ರಾಜಕುಮಾರ’ನ ವಿಶೇಷ ಉಚಿತ ಪ್ರದರ್ಶನ ಏರ್ಪಡಿಸಲಾಯಿತು. 

ಇಂದು ಮುಂಜಾನೆ ಚಿತ್ರಮಂದಿರದಲ್ಲಿ ರಾಜಕುಮಾರ ಚಿತ್ರ ಪ್ರದರ್ಶನವಾಗಿದ್ದು, ಇದು ಸಂಪೂರ್ಣವಾಗಿ ಉಚಿತವಾಗಿತ್ತು. ನೂರಾರು ಮಂದಿ ಪುನೀತ್ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ರಾಜಕುಮಾರ ಪ್ರದರ್ಶನ ಸಂದರ್ಭದಲ್ಲಿ ಅಪ್ಪು ವಿಶೇಷ ವಿಡಿಯೊವನ್ನು ಚಿತ್ರಮಂದಿರಲ್ಲಿ ಬಿಡುಗಡೆ ಮಾಡಲಾಯಿತು. ನಂತರ ಈ ಚಿತ್ರಮಂದಿರದಲ್ಲಿ ಭಜರಂಗಿ 2 ಪ್ರದರ್ಶನ ಕಾಣಲಿದೆ. 

ಪುನೀತ್​ ರಾಜ್​ಕುಮಾರ್ ಅವರು ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಅವುಗಳಲ್ಲಿ 2017ರಲ್ಲಿ ತೆರೆಗೆ ಬಂದ ಸಂತೋಷ್ ಆನಂದ್ ರಾಮ್ ನಿರ್ದೇಶನದ ಚಿತ್ರ ರಾಜಕುಮಾರ ಕೂಡ ಒಂದು. ಅದರ ಬೊಂಬೆ ಹೇಳುತೈತೆ ಹಾಡು ಅತ್ಯಂತ ಜನಪ್ರಿಯವಾಗಿದ್ದು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಇಷ್ಟಪಟ್ಟಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *