News

ಪುನೀತ್ ಜೇಮ್ಸ್ ಗೆ ವಾಯ್ಸ್ ಕೊಡ್ತಾರಾ ಶಿವಣ್ಣ..?

ಪುನೀತ್ ಜೇಮ್ಸ್ ಗೆ ವಾಯ್ಸ್ ಕೊಡ್ತಾರಾ ಶಿವಣ್ಣ..?
  • PublishedNovember 27, 2021

ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಅಗಲಿ ವಾರಗಳೇ ಕಳೆದಿವೆ. ಆದ್ರೆ ಈಗಲೂ ಆ ಸತ್ಯ ಅರಗಿಸಿಕೊಳ್ಳುವಂತದ್ದಲ್ಲ. ಹಾಗೇ ಜೇಮ್ಸ್ ಚಿತ್ರವೇ ಅವರ ಕಡೆಯ ಚಿತ್ರ ಅಂದ್ರೆ ಅಭಿಮಾನಿಗಳಿಗೆ ಅದಕ್ಕಿಂತ ನೋವು ಮತ್ತೊಂದಿಲ್ಲ. ಸತ್ಯ ಕಹಿಯಾದರೂ ಅವರಿಲ್ಲ, ಅವರ ಸಿನಿಮಾಗಳು ಇನ್ನು ಬರೋದಿಲ್ಲ ಅನ್ನೋದು ಅಷ್ಟೇ ಸತ್ಯ ಅಲ್ವಾ. ಹೀಗಾಗಿ ನೋವಿನ ಮನಸ್ಸಿ‌ನಲ್ಲೇ ಆ ಎಲ್ಲಾ ಕಹಿ ಘಟನೆಗಳನ್ನು ಫ್ಯಾನ್ಸ್ ಒಪ್ಪಿಕೊಂಡಿದ್ದಾರೆ.

ಈ ಎಲ್ಲಾ ನೋವಿನ ನಡುವೆ ಸ್ಯಾಂಡಲ್ ವುಡ್ ನಲ್ಲಿ ಕೊರತೆಯೊಂದು ಕಾಡುತ್ತಿದೆ. ಅದು ಅಪ್ಪು ಕಡೆಯ ಚಿತ್ರ ಇನ್ನು ಕಂಪ್ಲೀಟ್ ಆಗದೆ ಇರುವುದು. ಅಪ್ಪು ವಾಯ್ಸ್ ಕೇಳೋದು ಅಂದ್ರೆ ಅದೊಂಥರ  ಖುಷಿ. ಅಣ್ಣಾವ್ರಂತೆ ನಟನೆ, ಹಾಡುಗಾರಿಕೆಯಲ್ಲೂ ಅಪ್ಪು ಮುಂದಿದ್ರು. ಅವರೆಲ್ಲಾ ಸಿನಿಮಾದಲ್ಲು ಅವರದ್ದೇ ಧ್ವನಿ ಎಲ್ಲರ ಕಿವಿಯನ್ನ ಇಂಪುಗೊಳಿಸುತ್ತಿತ್ತು. ಆದ್ರೆ ಜೇಮ್ಸ್ ಚಿತ್ರದಲ್ಲಿ ಆ ಭಾಗ್ಯವೂ ಇಲ್ಲದಂತಾಗಿದೆ.

ಜೇಮ್ಸ್ ಚಿತ್ರದಲ್ಲಿ ಅಪ್ಪು ವಾಯ್ಸ್ ಡಬ್ಬಿಂಗ್ ಬಾಕಿ ಉಳಿದಿದ್ದು, ಅಭಿಮಾನಿಗಳು ಅಭಿಮಾನದಿಂದ ಶಿವಣ್ಣನ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ತಮ್ಮನ ಜೊತೆ ಸ್ಕ್ರೀನ್ ಶೇರ್ ಮಾಡಿದ ದೃಶ್ಯವನ್ನಂತು ನೋಡಲಾಗಲಿಲ್ಲ. ಈಗ ಅಪ್ಪುವಿನ ಸಿನಿಮಾಗೆ ನೀವೆ ಧ್ವನಿಯಾಗಬೇಕು ಎಂದಿದ್ದಾರೆ. ಇದಕ್ಕೆ ಒಂದರ್ಥದಲ್ಲಿ ಶಿವಣ್ಣ ಒಪ್ಪಿದ್ರು ಕೂಡ, ನಯವಾಗಿಯೇ ಒಂದು ಮನವಿಯನ್ನು ಮಾಡಿದ್ದಾರೆ.

ಅಪ್ಪುಗೆ ಒಪ್ಪುವಂತಹ ಧ್ವನಿ ಕೊಡಿಸಲು ಯತ್ನಿಸಿ. ಒಂದು ವೇಳೆ ಯಾರು ಸಿಗದೇ ಇದ್ದರೆ ಆಗ ನಾನೆ ಕೊಡುತ್ತೇನೆಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ನನ್ನ ಧ್ವನಿ ಅಪ್ಪುಗೆ ಅಷ್ಟೊಂದು ಒಪ್ಪಿಗೆ ಆಗಲ್ಲ. ಅದಕ್ಕೆ ನ್ಯಾಯ ಕೊಡಬೇಕಲ್ಲವೇ ಅ‌ಂದಿದ್ದಾರೆ ಶಿವಣ್ಣ.

****

Written By
Kannadapichhar

Leave a Reply

Your email address will not be published. Required fields are marked *