News

ಪುಕ್ಸಟ್ಟೆ ಲೈಫು ಕಥೆಯ ಹುಟ್ಟಿನ ಗುಟ್ಟು ಈಗ ರಟ್ಟು

ಪುಕ್ಸಟ್ಟೆ ಲೈಫು ಕಥೆಯ ಹುಟ್ಟಿನ ಗುಟ್ಟು ಈಗ ರಟ್ಟು
  • PublishedSeptember 16, 2021

ನಟ ಸಂಚಾರಿ ವಿಜಯ್ ಅವರು ನಮ್ಮನ್ನಗಲಿ ಮೂರ್ನಾಲ್ಕು ತಿಂಗಳುಗಳು ಕಳೆದಿವೆ ಆದರೆ ಅವರ ಶ್ರಮದ ಕೆಲಸಗಳು ಇನ್ನೂ ಜೀವಂತ. ಸಂಚಾರಿ ವಿಜಯ್ ಅಭಿನಯಿಸಿದ್ದು, ಇದೀಗ ತೆರೆಗೆ ಬರಲು ಸಿದ್ಧವಾಗಿರುವ ‘ಪುಕ್ಸಟ್ಟೆ ಲೈಫು’ ಚಿತ್ರಕ್ಕೆ ಕಥೆ ಹೇಳಿದ್ದು ಕೂಡ ಅವರೇ. ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ವಿಜಯ್ ಅವರು ಇದ್ದಾಗಲೇ ತೆರೆಕಾಣಬೇಕಿತ್ತು ಆದರೆ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೊರೋನಾ ಕರುನಾಡಿನಲ್ಲೂ ತನ್ನ ಕೆನ್ನಾಲಿಗೆಯನ್ನ ಚಾಚಿತ್ತು ಹಾಗಾಗಿ ಸಿನಿಮಾ ತೆರೆ ಕಾಣುವುದು ಸಾಕಷ್ಟು ತಡವಾಗಿದೆ.

ಅವರಿಲ್ಲದ ಈ ಹೊತ್ತಿನಲ್ಲಿ ವಿಜಯ್ ಮಾಡಿದ ಮೆಚ್ಚುಗೆಗೆ ಅರ್ಹವಾದ ಅನೇಕ ಕೆಲಸಗಳು ಬೆಳಕಿಗೆ ಬರುತ್ತಿವೆ. ವಿಜಯ್ ನಟ ಮಾತ್ರವಲ್ಲ, ಅವರಲ್ಲೋಬ್ಬ ಅದ್ಭುತ ಕಥೆಕಾರ ಕೂಡ ಇದ್ದ ಎಂಬುದೀಗ ತಿಳಿದ್ದಿದ್ದು, ಚಿತ್ರದ ನಿರ್ದೇಶಕ ಹಾಗೂ ವಿಜಯ್ ಅವರ ಬಹುಕಾಲದ ಗೆಳೆಯ ಅರವಿಂದ್ ಕುಳ್ಳೀಕರ್ ಆ ಕುರಿತು ಹೀಗೆ ಹೇಳಿದ್ದಾರೆ. ‘ನಾನು ಪುಕ್ಸಟ್ಟೆ ಲೈಫು ಚಿತ್ರವನ್ನು ನಿರ್ದೇಶಿಸಲು ವಿಜಯ್ ಅವರೇ ಕಾರಣ ಮತ್ತು ಚಿತ್ರಕ್ಕೆ ಕಥೆ ನೀಡಿದ್ದೆ ವಿಜಯ್’. ಈ ಸಿನಿಮಾವನ್ನು ಬೇರೆಯವರು ಮಾಡಬೇಕಿತ್ತು ಆದರೆ ಅದು ಆಗಲಿಲ್ಲ. ಇದರಿಂದ ಬೇಸರಗೊಂಡಿದ್ದ ಬೇಜಾರು ಕಥೆಯ ಒಂದು ಎಳೆಯನ್ನಷ್ಟೇ ನನಗೆ ಹೇಳಿದ್ದರು. ನನಗೂ ಇಷ್ಟವಾಯ್ತು ಹಾಗಾಗಿ ನಾವೇ ಮಾಡೋಣ ಎಂದು ಸಿನಿಮಾ ತಯಾರಿಗೆ ನಿಂತೆವು. ಈಗ ಸಿನಿಮಾ ನೋಡಿದವರೆಲ್ಲ ಚಿತ್ರದಲ್ಲಿನ ವಿಜಯ್ ಪಾತ್ರವನ್ನು ಬಹಳಷ್ಟು ಮೆಚ್ಚಿಕೊಂಡಿದ್ದಾರೆ. ಸಿನಿಮಾದಲ್ಲಿ ವಿಜಯ್ ಬೀಗ ರಿಪೇರಿ ಮಾಡುವ ಹುಡುಗನಾಗಿ ನಟಿಸಿರುವ ಕುರಿತು ನಟ ಕಿಚ್ಚ ಸುದೀಪ್ ಅವರು ಕೂಡ ಬೇಷ್ ಎಂದಿದ್ದಾರೆ ಆದರೆ ಅದೆಲ್ಲವನ್ನು ನೋಡಿ-ಕೇಳಿ, ಅನುಭವಿಸಿ ಆನಂದಿಸಲು ಅವರೇ ಇಲ್ಲ ಎಂದರು.

ಈ ಚಿತ್ರದಲ್ಲಿ ನಟ ಅಚ್ಯುತ್ ಕುಮಾರ್ ಹಾಗೂ ರಂಗಾಯಣ ರಘು ಕೂಡ ನಟಿಸಿದ್ದಾರೆ. ಯಾವುದೇ ಪಾತ್ರಕ್ಕೆ ಶ್ರಮ ಹಾಕಿ ಜೀವ ತುಂಬುತ್ತಿದ್ದ ನಟ ಅಂದ್ರೆ ಸಂಚಾರಿ ವಿಜಯ್ ಅನ್ನೋದು ಸಾಕಷ್ಟು ಸಾಭಿತಾಗಿದೆ. ಅದೇ ರೀತಿ ಈ ಚಿತ್ರಕ್ಕಾಗಿಯೂ ವಿಜಯ್ ಹೆಚ್ಚು ತಯಾರಿ ಮಾಡಿಕೊಂಡಿದ್ದಲ್ಲದೆ, ತಮ್ಮ ದೇಹದ ತೂಕವನ್ನು ಕೂಡ ಕಡಿಮೆ ಮಾಡಿದ್ದರಂತೆ. ಈ ಚಿತ್ರ ಬೆಂಗಳೂರಿನ ಮಲ್ಲೇಶ್ವರಂ ಹಾಗೂ ಕನಕಪುರದಲ್ಲಿ ಚಿತ್ರೀಕರಣ ಆಗಿದೆ ಆ ಸಂದರ್ಭದಲ್ಲಿ ಶೂಟಿಂಗ್ ಸ್ಥಳಕ್ಕೆ ವಿಜಯ್ ಸೈಕಲ್ ನಲ್ಲಿಯೇ ಬರುತ್ತಿದ್ದರು ಎಂದು ನೆನೆಯುತ್ತಾರೆ ನಿರ್ದೇಶಕ ಅರವಿಂದ್.

ಪುಕ್ಸಟ್ಟೆ ಲೈಫು ಚಿತ್ರದಲ್ಲಿ ಒಬ್ಬ ಬೀಗ ರಿಪೇರಿ ಮಾಡುವ ಮುಗ್ಧ ಹುಡುಗ ಅಪರಾಧ ಜಗತ್ತಿನಲ್ಲಿ ಸಿಲುಕಿಕೊಳ್ಳುವ ಬಗ್ಗೆ, ಪೊಲೀಸರ ವರ್ತನೆ ಮತ್ತು ಹಾಗೆ ಸಿಲುಕಿದ ಯುವಕರ ಬದುಕು ಹೇಗಿರಲಿದೆ ಎಂಬುದನ್ನು ಹೇಳಲಾಗಿದೆ. ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಮುಗ್ಧರನ್ನು ಯಾವುದೋ ಕೇಸ್ ನಲ್ಲಿ ಉದ್ದೇಶಪೂರ್ವಕವಾಗಿ ಸಿಲುಕಿಸಿ ಅಪರಾಧಿ ಎಂಬಂತೆ ತೋರ್ಪಡಿಸಿದಾಗ ಹೇಗೆ ಶಿಕ್ಷೆ ಆಗುತ್ತೆ, ಪೊಲೀಸರು ಅಮಾಯಕರನ್ನ ಟ್ರ್ಯಾಪ್ ಮಾಡುವ ರೀತಿ, ಮೈ ಮುರಿದು ದುಡಿಯದೆ ಪುಕ್ಸಟ್ಟೆಯಾಗಿ ಜನರು ಹೇಗೆ ಸಂಪಾದಿಸುತ್ತಾರೆ ಎಂಬುದು ಸಿನಿಮಾದಲ್ಲಿದೆ.

****

Written By
Kannadapichhar

Leave a Reply

Your email address will not be published. Required fields are marked *