News

‘ಪುಕ್ಸಟ್ಟೆ ಲೈಫು’ಪ್ರೀಮಿಯರ್ ಶೋ : ಸಂಚಾರಿ ವಿಜಯ್ ಗೆ ಸೀಟ್ ರಿಸರ್ವ್ ಮಾಡಿದ ಚಿತ್ರತಂಡ

‘ಪುಕ್ಸಟ್ಟೆ ಲೈಫು’ಪ್ರೀಮಿಯರ್ ಶೋ : ಸಂಚಾರಿ ವಿಜಯ್ ಗೆ ಸೀಟ್ ರಿಸರ್ವ್ ಮಾಡಿದ ಚಿತ್ರತಂಡ
  • PublishedSeptember 23, 2021

ರಾಷ್ಟ್ರಪ್ರಶಸ್ತಿ ವಿಜೇತ ದಿವಂಗತ ನಟ ಸಂಚಾರಿ ವಿಜಯ್ ನಟನೆಯ ಸ್ಯಾಂಡಲ್ ವುಡ್ ನ ಪುಕ್ಸಟ್ಟೆ ಲೈಫು ಸಿನಿಮಾದ ಪ್ರೀಮಿಯರ್ ಶೋ ಮೈಸೂರಲ್ಲಿ ನಡೆಯಿತು. ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರೋ ನಟನನ್ನು ಮಿಸ್ ಮಾಡಿಕೊಳ್ತಿರೋ ಚಿತ್ರ ತಂಡ ನಟ ಸಂಚಾರಿ ವಿಜಯ್ ಗೆಂದೇ ಪ್ರತ್ಯೇಕ ಆಸನ ಮೀಸಲಿಟ್ಟಿತ್ತು. ಅಷ್ಟೇ ಅಲ್ಲದೆ ಸೀಟ್ ಮೇಲೆ ಸಂಚಾರಿ ವಿಜಯ್ ಅಂತಲೂ ಬರೆಯಲಾಗಿತ್ತು.

ಜೂನ್ 15 ರಂದು ಬೈಕ್ ಅಪಘಾತದಲ್ಲಿ ತೀರಿಕೊಂಡ ಸಂಚಾರಿ ವಿಜಯ್ ಅವರನ್ನು ಚಿತ್ರ ತಂಡ ಸ್ಮರಿಸಿದೆ. ಚಿತ್ರತಂಡದ ಈ ವಿಭಿನ್ನ ಗೌರವದ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಂಚಾರಿ ವಿಜಯ್ ಅಭಿಮಾನಿಗಳು ಪೋಟೋ ನೋಡಿ ಕಣ್ಣೀರು ಮಿಡಿದಿದ್ದಾರೆ.ಇನ್ನು ಈ ಚಿತ್ರದಲ್ಲಿ ಸಂಚಾರಿ ವಿಜಯ್ ಮತ್ತೊಮ್ಮೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರವಿಂದ್ ಕುಪ್ಳಿಕರ್ ನಿರ್ದೇಶನದ ಈ ಚಿತ್ರವನ್ನು ಸರ್ವಸ್ವ ಪ್ರೊಡಕ್ಷನ್ ಬಂಡವಾಳ ಹೂಡಿದೆ.

****

Written By
Kannadapichhar

Leave a Reply

Your email address will not be published. Required fields are marked *