‘ನಿನ್ನ ಸನಿಹಕೆ’ ಸಿನಿಮಾ ವೀಕ್ಷಿಸಿದ ಸ್ಯಾಂಡಲ್ ವುಡ್ ಸ್ಟಾರ್ಸ್..!

‘ನಿನ್ನ ಸನಿಹಕೆ’ ಚಿತ್ರ ಇಂದು (ಅ 8) ಶುಕ್ರವಾರ ರಾಜಾದ್ಯಂತ 200 ಚಿತ್ರ ಮಂದಿರದಲ್ಲಿ ಬಿಡುಗಡೆ ಆಗಿದೆ. ಡಾ ರಾಜ್ ಕುಟುಂಬದ ಕುಡಿ ಧನ್ಯಾ ರಾಮ್ ಕುಮಾರ್ ಮತ್ತು ಸೂರಜ್ ಗೌಡ ಜೊತೆಯಾಗಿ ಅಭಿನಯಿಸಿರುವ ನಿನ್ನ ಸನಿಹಕೆ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಎಲ್ಲಾ ಹಾಡುಗಳು ಜನ ಮೆಚ್ಚುಗೆ ಪಡೆದಿವೆ. ಲೀವಿಂಗ್ ಇನ್ ರಿಲೇಷನ್ ಶಿಪ್ ಸಬ್ಜೆಕ್ಟ್ ಎಳೆಯನ್ನು ಇಟ್ಟ್ಕೊಂಡು ಯುವ ತಲೆಮಾರುಗಳ ಪ್ರೀತಿ ಪ್ರೇಮ ಸಂಬಂಧಗಳ ಸಂಬಂಧದಲ್ಲಿ ಇರುವ ಏಳು-ಬೀಳುಗಳೇನು? ಎದುರಾಗುವ ಸಮಸ್ಯೆಗಳೇನು? ಅದನ್ನು ಅವರು ಹೇಗೆ ಪರಿಹರಿಸಿಕೊಳ್ಳುತ್ತಾರೆ ಎಂಬುದನ್ನ ನವಿರಾಗಿ ಎಣೆದಿರುವ ಚಿತ್ರ ‘ನಿನ್ನ ಸನಿಹಕೆ’
ಗುರುವಾರ (ಅ7) ಸಂಜೆ ಡಾ ರಾಜ್ ಕುಮಾರ್ ರಸ್ತೆಯಲ್ಲಿರುವ ಒರಾಯನ್ ಮಾಲ್ ನ ಪಿವಿಆರ್ ನಲ್ಲಿ ‘ನಿನ್ನ ಸನಿಹಕೆ’ ಚಿತ್ರದ ಪ್ರಿಮಿಯರ್ ಶೋ ನಡೆದಿದ್ದು, ಸ್ಯಾಂಡಲ್ ವುಡ್ ನ ಸ್ಟಾರ್ಸ್ ಗಳು ಮತ್ತು ದೊಡ್ಮನೆಯ ಎಲ್ಲಾ ಸದಸ್ಯರು ಪ್ರಿಮಿಯರ್ ಶೋಗೆ ಆಗಮಿಸಿದ್ದರು. ಸೂರಜ್ ಮತ್ತು ಧನ್ಯಾ ಅವರ ನಟನೆ ಮತ್ತು ಸಿನಿಮಾದ ಬಗ್ಗೆ ಏನು ಹೇಳಿದ್ದಾರೆ ಕೇಳೋಣ ಬನ್ನಿ.