ನಿಖಿಲ್ ಮಗುವನ್ನು ನೋಡಲು ಆಸ್ಪತ್ರೆಗೆ ಬಂದ ಹೆಚ್.ಡಿ.ದೇವೇಗೌಡ ಚೆನ್ನಮ್ಮ ದಂಪತಿ

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಗಂಡು ಮಗು ಜನಿಸಿದ್ದು,ಮಗುವಿನ ಆಗಮನದಿಂದ ದೇವೇಗೌಡ ಅವರ ಕುಟುಂಬದಲ್ಲಿ ಸಂಭ್ರಮ ಹೆಚ್ಚಿದೆ. ತಾಯಿ ಮತ್ತು ಮಗುವನ್ನು ನೋಡಲು ದೇವೇಗೌಡ ಹಾಗೂ ಚೆನ್ನಮ್ಮ ದಂಪತಿ ಆಸ್ಪತ್ರೆಗೆ ಭೇಟಿ ನೀಡಿ ಮಗೂ ಮತ್ತು ತಾಯಿಯ ಆರೋಗ್ಯವನ್ನು ವಿಚಾರಿಸಿದ್ದಾರೆ. ಮೊಮ್ಮಗ ನಿಖಿಲ್ ಅವರೊಂದಿಗೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.


****