News

ನಿಖಿಲ್ ಪತ್ನಿ ರೇವತಿ ಗೆ ಸೀಮಂತ: ಹೆಚ್ಡಿಡಿ ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ

ನಿಖಿಲ್ ಪತ್ನಿ ರೇವತಿ ಗೆ ಸೀಮಂತ: ಹೆಚ್ಡಿಡಿ ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ
  • PublishedSeptember 13, 2021

ದೇವೇಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರ ಪ್ರೀತಿಯ ಪುತ್ರ ನಿಖಿಲ್ ಕುಮಾರ್ ಸ್ವಾಮಿ ಪತ್ನಿ ರೇವತಿಗೆ ಇದೀಗ ಎಂಟು ತಿಂಗಳು ತುಂಬಿದ್ದು, ನಗರದ ಹೆಚ್‍ಎಸ್‍ಆರ್ ಲೇಔಟ್‍ನ ಮಾನ್ವಿ ಕನ್ವೆನ್ಷನ್ ಹಾಲ್‍ನಲ್ಲಿ ಸೀಮಂತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅಲ್ಲದೇ ಕೊರೊನಾ ಕಾರಣದಿಂದಾಗಿ ಈ ಕಾರ್ಯಕ್ರಮಕ್ಕೆ ಕೇವಲ ಆಪ್ತರು, ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

ಕಳೆದ ವರ್ಷ 2020ರ ಏಪ್ರಿಲ್​ನಲ್ಲಿ ರೇವತಿ ಜೊತೆ ನಿಖಿಲ್​ ಕುಮಾರಸ್ವಾಮಿ ಸಪ್ತಪದಿ ತುಳಿದಿದ್ದರು. ಲಾಕ್​ಡೌನ್​ ನಿಯಮಗಳ ಅನುಸಾರ ಈ ಹೈಪ್ರೊಫೈಲ್​ ಕುಟುಂಬದಲ್ಲಿ ವಿವಾಹ ಸಮಾರಂಭ ಸರಳವಾಗಿ ನೆರವೇರಿತ್ತು. ಬಿಡದಿ ಬಳಿ ಇರುವ ಫಾರ್ಮ್​ಹೌಸ್​ನಲ್ಲಿ ರೇವತಿ ಮತ್ತು ನಿಖಿಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ರೇವತಿ ಪ್ರೆಗ್ನೆಂಟ್​ ಎಂಬ ಸುದ್ದಿ ಇತ್ತೀಚಿನ ಕೆಲವು ತಿಂಗಳುಗಳಿಂದ ಕೇಳಿಬರುತ್ತಿತ್ತು. ಈ ವರ್ಷ ಜೂನ್​ನಲ್ಲಿ ಆ ಬಗ್ಗೆ ಸ್ವತಃ ನಿಖಿಲ್​ ಪ್ರತಿಕ್ರಿಯೆ ನೀಡಿದ್ದರು. ‘ಕೇಳಿಬರುತ್ತಿರುವ ಸುದ್ದಿ ನಿಜ. ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ಶೀಘ್ರದಲ್ಲಿ ನಮ್ಮ ಕುಟುಂಬಕ್ಕೆ ಹೊಸ ಅತಿಥಿ ಬರಲಿದ್ದಾರೆ’ ಎಂದು ನಿಖಿಲ್​ ಹೇಳಿದ್ದರು.

****

Written By
Kannadapichhar

Leave a Reply

Your email address will not be published. Required fields are marked *