News

ನಾಳೆ (ಡಿ.7) ಸಿಗಲಿದೆ ‘ಕಿಚ್ಚ’ ನ ವಿಕ್ರಾಂತ್ ರೋಣ ಚಿತ್ರದ ಅಪ್ಡೇಟ್ಸ್..!

ನಾಳೆ (ಡಿ.7) ಸಿಗಲಿದೆ ‘ಕಿಚ್ಚ’ ನ ವಿಕ್ರಾಂತ್ ರೋಣ ಚಿತ್ರದ ಅಪ್ಡೇಟ್ಸ್..!
  • PublishedDecember 6, 2021

ಸ್ಯಾಂಡಲ್ ವುಡ್ ನ ಬಾದ್ ಷಾ ಕಿಚ್ಚ ಸುದೀಪ್ ಹಾಗೂ ರಂಗಿತರಂಗ ಸಿನಿಮಾ ಖ್ಯಾತಿಯ ಅನೂಪ್ ಭಂಡಾರಿ ಕಾಂಬಿನೇಷನ್‍ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ವಿಕ್ರಾಂತ್ ರೋಣ.ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಚಿತ್ರದ ಕುರಿತು ಸಿನಿ ಪ್ರೇಮಿಗಳಲ್ಲಿ ಒಂದು ವಿಶೇಷವಾದ ಆಸಕ್ತಿ ಇದೆ. ಇದಕ್ಕೆ ಕಾರಣ ಸಿನಿಮಾದ ಮೇಕಿಂಗ್.

ಹೌದು..! ವಿಕ್ರಾಂತ್ ರೋಣ ಸಿನಿಮಾವನ್ನು ಅನೂಪ್ ಭಂಡಾರಿ ತುಂಬಾ ಮುತುವರ್ಜಿ ವಹಿಸಿ ತೆಗೆಯುತ್ತಿದ್ದಾರೆ. ಹಾಗೇ ಪ್ಯಾನ್ ಇಂಡಿಯಾ ಸಿನಿಮಾ ಕೂಡ. ಹೀಗಾಗಿ ಸಿನಿಮಾದ ಮೇಲೆ ಒಂದಿಷ್ಟು ನಿರೀಕ್ಷೆಗಳಿದ್ದವು. ಆದ್ರೆ  ಆ ನಿರೀಕ್ಷೆಗಳನ್ನ ಹಿಮಾಲಯದಷ್ಟು ಮಾಡಿದ್ದು, ಸಿನಿಮಾ ಪೋಸ್ಟರ್ ಗಳು ಮತ್ತು ಟೀಸರ್ ಗಳು. ಅದರಲ್ಲೂ ಸಿನಿಮಾದ ಟೈಟಲ್ ಲೋಗೋ ಟೀಸರನ್ನು  ವಿಶ್ವದ ಅತಿ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫಾದಲ್ಲಿ ಲಾಂಚ್ ಮಾಡಿದ್ದು, ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.

ಹೀಗಾಗಿ ವಿಕ್ರಾಂತ್ ರೋಣ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ  ಎಂದು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯ್ತಾಯಿದ್ದಾರೆ.  ಈಗಾಗಲೇ, ವಿಕ್ರಾಂತ್ ರೋಣ ಚಿತ್ರದ ಪ್ರಚಾರ ಜೋರಾಗಿ ಶುರುವಾಗಿದೆ. ಇದೀಗ ಸಿನಿಮಾ ರಿಲೀಸ್ ಬಗ್ಗೆ ಕಿಚ್ಚ ಸುದೀಪ್ ಒಂದು ಮೇಜರ್ ಅಪ್ ಡೇಟ್ ಕೊಟ್ಟಿದ್ದಾರೆ. ಅದೆನಂದರೇ ನಾಳೆ ಬೆಳಿಗ್ಗೆ 11.05ಗೆ ಸಿನಿಮಾ ರಿಲೀಸ್ ಡೇಟ್ ತಿಳಿಸುವುದಾಗಿ  ಮಾಹಿತಿ ನೀಡಿದ್ದಾರೆ. ವಿಕ್ರಾಂತ್ ರೋಣ ವಿಲ್ ರಿಪೋರ್ಟ್ ಆನ್..? ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಇನ್ನು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ವಿಕ್ರಾಂತ್ ರೋಣ ತೆರೆಗೆ ಬರಲಿದೆ. ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ 50ಕ್ಕೂ ಹೆಚ್ಚು ದೇಶಗಳಲ್ಲಿ ವಿಕ್ರಾಂತ್ ರೋಣ ಅಬ್ಬರಿಸಲಿದ್ದಾನೆ. ಅಂದಹಾಗೆ ಕಿಚ್ಚ ಸುದೀಪ್ ಬರ್ತ್ ಡೇ ಅಂಗವಾಗಿ ರಿಲೀಸ್ ಆದ ಡೆಡ್ ಮ್ಯಾನ್ ಆಂಥಂ ಸಾಂಗ್ ಭಾರಿ ಸದ್ದು ಮಾಡಿತ್ತು.ಸಾಂಗ್ ನ ಗ್ಲಿಂಪ್ಸ್ ನೋಡಿದ ಪ್ರತಿವೊಬ್ಬರು  ಸಿನಿಮಾದ ಮೇಕಿಂಗ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

****

Written By
Kannadapichhar

Leave a Reply

Your email address will not be published. Required fields are marked *