ನಾಯಕಿಯ ಹುಡುಕಾಟ ಮಾಡುತ್ತಿದ್ದಾನೆ ‘ಮಾರ್ಟಿನ್’

‘ಮಾರ್ಟಿನ್’ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ಯಾರು ಆಯ್ಕೆಯಾಗಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ, ಈಗ ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಹೌದು, ಈ ಸಿನಿಮಾಗಾಗಿ ಹೊಸ ನಾಯಕಿಯ ಹುಡುಕಾಟದಲ್ಲಿದೆ ಚಿತ್ರತಂಡ. ಸಿನಿಮಾದಲ್ಲಿನ ಫಿಮೇಲ್ ಲೀಡ್ ರೋಲ್ಗಾಗಿ ಈಗ ಪ್ರಕಟಣೆ ಹೊರಡಿಸಿದ್ದಾರೆ ನಿರ್ದೇಶಕ ಎ.ಪಿ. ಅರ್ಜುನ್. ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ಕುರಿತಾಗಿ ಒಂದು ಪೋಸ್ಟ್ ಮಾಡಿರುವ ನಿರ್ದೇಶಕ, ನಾಯಕಿಯ ಪಾತ್ರಕ್ಕಾಗಿ ಹುಡುಕಾಟ ನಡೆದಿದೆ ಎಂದು ಬರೆದುಕೊಂಡಿದ್ದಾರೆ. ಆಸಕ್ತರು ಕೂಡಲೇ Martinmovie1234@Gmail.com ಗೆ ಅರ್ಜಿಗಳನ್ನು ಕಳುಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಾಯಕಿಯಾಗಿ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಅವಕಾಶಕ್ಕಾಗಿ ಕಾಯುತ್ತಿರುವವರು ಈ ಇ-ಮೇಲ್ ಐಡಿಗೆ ಸಂಪರ್ಕಿಸಬಹುದಾಗಿದೆ. ನಿಮ್ಮ ಅದೃಷ್ಟ ಚೆನ್ನಾಗಿದ್ದಾರೆ ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಜತೆ ನಾಯಕಿಯಾಗಿ ಬೆಳ್ಳಿ ತೆರೆಯ ಮೇಲೆ ಮಿಂಚಬಹುದಾಗಿದೆ. ಮೊದಲ ದಿನದಿಂದಲೇ ಮಾರ್ಟಿನ್ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಗಳನ್ನು ಹೆಚ್ಚಿಸುವಲ್ಲಿ ಸಕ್ಸಸ್ ಆಗಿದೆ. ಜೊತೆಗೆ ಯೂಟ್ಯೂಬ್‍ನಲ್ಲಿ ರಿಲೀಸ್ ಆದ ಕೇವಲ 15 ತಾಸುಗಳಲ್ಲೇ ಬರೋಬ್ಬರಿ 70 ಲಕ್ಷಕ್ಕೂ ಅಧಿಕ ವೀವ್ಸ್ ಹಾಗೂ 1.35 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದು 2ನೇ ಸ್ಥಾನದಲ್ಲಿ ಟ್ರೆಂಡ್ ಆಗುವ ಮೂಲಕ ಮಾರ್ಟಿನ್ ಟೈಟಲ್ ಟೀಸರ್ ಹೊಸ ದಾಖಲೆ ನಿರ್ಮಿಸಿತ್ತು.