News

ಯಾವಾಗ್ಲೂ ನಾನು ಶಿವಣ್ಣನ ಫ್ಯಾನೆ..! ರಾಕಿಂಗ್ ಸ್ಟಾರ್ ಯಶ್

ಯಾವಾಗ್ಲೂ ನಾನು ಶಿವಣ್ಣನ ಫ್ಯಾನೆ..! ರಾಕಿಂಗ್ ಸ್ಟಾರ್ ಯಶ್
  • PublishedOctober 26, 2021

ಕೊರೋನಾ ಕಾರಣಕ್ಕೆ ಸ್ತಬ್ಧವಾಗಿದ್ದ ಕನ್ನಡ ಚಿತ್ರರಂಗ ಈಗ ರಂಗೇರುತ್ತಿದೆ. ಕೊವಿಡ್ ಪ್ಯಾಂಡಮಿಕ್ ಈಗ ಎಂಡಮಿಕ್ ಆಗ್ತಿದೆ ಎಂಬ ಭರವಸೆಯಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ಮುಖ್ಯವಾಗಿ ಭಾರೀ ಮೊತ್ತದ ಬಜೆಟ್ ಹೂಡಿಕೆಯ ಸಿನಿಮಾಗಳೇ ಒಂದರ ಹಿಂದೆ ಒಂದರಂತೆ ಬಿಡುಗಡೆ ಆಗುತ್ತಿವೆ.  ಇನ್ನು ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ಸಿನಿಮಾ ಕೂಡಾ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಗೆ ಯಶ್ ಅತಿಥಿಯಾಗಿ ಭಾಗವಹಿಸಿರುವುದು ಚಿತ್ರತಂಡಕ್ಕೆ ಮತ್ತಷ್ಟು ಬೂಸ್ಟ್ ನೀಡಿದೆ.

ಇಡೀ ಗಾಂಧಿನಗರವೇ ಕಾಯುತ್ತಿರುವ ಹ್ಯಾಟ್ರಿಕ್ ಹೀರೊ ಶಿವಣ್ಣ ಮತ್ತು ಡೈರೆಕ್ಟರ್ ಹರ್ಷ ಕಾಂಬಿನೇಶನ್ ನಲ್ಲಿ ಮೂಡಿ ಬಂದಿರುವ ಭಜರಂಗಿ 2 ಚಿತ್ರ ಇದೇ ಅಕ್ಟೋಬರ್ 29 ರಂದು ರಾಜಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗ್ತಿದೆ. ಅದರ ಪ್ರಿ ರಿಲೀಸ್ ಇವೆಂಟ್  ಇಂದು(ಅ 26) ನಡೆಯುತ್ತಿದ್ದು ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾಗವಹಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗನ್ನು ನೀಡಿದ್ರು.

ರಾಕಿಂಗ್ ಸ್ಟಾರ್ ಯಶ್ ಪ್ರಿ ರಿಲೇಸ್ ಇವೆಂಟ್ ನ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಹಿಂದೆ ಬಿಡುಗಡೆ ಆದ ಭಜರಂಗಿ ಸಿನಿಮಾ ವನ್ನ ತ್ರಿವೇಣಿ ಥಿಯೇಟ್ರಲ್ಲಿ ಶಿವಣ್ಣನ ಒಬ್ಬ ಅಭಿಮಾನಿಯಾಗಿ ನೋಡಿದ್ದೇನೆ, ಈಗಲೂ ಅದೇ ಫ್ಯಾನ್ ಆಗಿ ಇಲ್ಲಿಗೆ ಬಂದಿದ್ದೇನೆ, ಇವತ್ತು ಸಿನಿಮಾ ಇಂಡಸ್ಟ್ರಿಗೆ ಬರುತ್ತಿರುವ ಹೊಸಬರಿಗೆ, ಯೂತ್ಸ್ ಗೆ ಎಲ್ಲರಿಗೂ ಶಿವಣ್ಣ, ಅಪ್ಪು ಮತ್ತು ಅಣ್ಣಾವ್ರು ಒಂದು ದಾರಿ ಹಾಕಿಕೊಟ್ಟಿದ್ದಾರೆ ಆ ದಾರಿಯಲ್ಲಿ ನಾವೆಲ್ಲರೂ ನಡೆಯುತ್ತಿದ್ದೇವೆ, ನಾವು ನಿಮ್ಮ ಚಿತ್ರಗಳನ್ನೆ ನೋಡಿ ಬೆಳದಿದ್ದೇವೆ ಶಿವಣ್ಣಾ ಈಗಲೂ ನಿಮ್ಮ ಎನರ್ಜಿ, ನಿಮ್ಮ ಸರಳತೆ, ಅಪ್ಪು ಅವರ ಪವರ್ ಎಲ್ಲವೂ ನಮಗೆ ಸ್ಪೂರ್ತಿ ಎಂದರು.

****

Written By
Kannadapichhar

Leave a Reply

Your email address will not be published. Required fields are marked *