News

ನವೆಂಬರ್ 12 ಕ್ಕೆ ಮೈಸೂರಿನಲ್ಲಿ ರಜನಿ ರಾಘವನ್ ಜೊತೆ ಸಂವಾದ

ನವೆಂಬರ್ 12 ಕ್ಕೆ ಮೈಸೂರಿನಲ್ಲಿ ರಜನಿ ರಾಘವನ್ ಜೊತೆ ಸಂವಾದ
  • PublishedNovember 11, 2021

ನವೆಂಬರ್ 12 ರ ಶುಕ್ರವಾರದಂದು ಸಂಜೆ 4 ಕ್ಕೆ ಮೈಸೂರು ನಗರದ ರಾಮಸ್ವಾಮಿ ವೃತ್ತದಲ್ಲಿರುವ ಪುಸ್ತಕ ಮಳಿಗೆ ‘ನವಕರ್ನಾಟಕ’ ಬಹುರೂಪಿ ಪ್ರಕಾಶನದ ಸಹಯೋಗದಲ್ಲಿ ‘ಕನ್ನಡತಿ’ ಹಾಗೂ ‘ಪುಟ್ಟಗೌರಿ ಮದುವೆ’ ಖ್ಯಾತಿಯ ನಟಿ, ಕಥೆಗಾರ್ತಿ ರಂಜನಿ ರಾಘವನ್ ಅವರೊಂದಿಗೆ ಸಂವಾದ ಹಾಗೂ ಅವರ ಕೃತಿಗೆ ಹಸ್ತಾಕ್ಷರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಂದು, ರಂಜನಿ ರಾಘವನ್ ಅವರು ತಮ್ಮ ಓದುಗರ ಜೊತೆ ಸೆಲ್ಫಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರಲ್ಲದೆ, ತಮ್ಮ ಕೃತಿಗೆ ಆಟೋಗ್ರಾಫ್ ಕೂಡ ನೀಡಲಿದ್ದಾರೆ. ಜತೆಗೆ ಕಿರು ಹಾಗೂ ಹಿರಿ ತೆರೆ ನಟಿಯಾಗಿ ನಡೆದು ಬಂದ ದಾರಿ, ಕಥೆಗಾರ್ತಿಯಾಗಿ ಹೊಸ ಆಯಾಮ ಪಡೆದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.

ನಟಿಯಾಗಿ ಜನಪ್ರಿಯರಾಗಿರುವ ರಂಜನಿ ರಾಘವನ್ ಅವರು ‘ಅವಧಿ’ ಅಂತರ್ಜಾಲ ತಾಣಕ್ಕೆ ಕಥೆ ಅಂಕಣವನ್ನು ಬರೆದರು. ಅವರ ಕಥೆಗಳು ಅತ್ಯಂತ ಜನಪ್ರಿಯವಾಗಿದ್ದು ‘ಬಹುರೂಪಿ’ ಪ್ರಕಾಶನ ಅದನ್ನು ‘ಕತೆ ಡಬ್ಬಿ’ಯಾಗಿ ಹೊರತಂದಿತು. ಒಂದು ತಿಂಗಳಲ್ಲಿ ನಾಲ್ಕು ಮುದ್ರಣ ಕಂಡ ಕೃತಿ ಎನ್ನುವ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ. ಪ್ರಕಟವಾದ ನಂತರ ಎಲ್ಲ ಪುಸ್ತಕ ಮಳಿಗೆಗಳಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕ ಎಂಬ ದಾಖಲೆಯನ್ನು ನಿರ್ಮಿಸಿದೆ.

****

Written By
Kannadapichhar

Leave a Reply

Your email address will not be published. Required fields are marked *