News

ನನ್ನ ಆಯಸ್ಸು ನಿನಗೆ ಕೊಡುತ್ತೇನೆ ಅಂದಿದ್ದೆ, ಆದರೆ..! ಅಪ್ಪು ನೆನೆದು ಬಿಕ್ಕಳಿಸಿದ ರಾಘಣ್ಣ!

ನನ್ನ ಆಯಸ್ಸು ನಿನಗೆ ಕೊಡುತ್ತೇನೆ ಅಂದಿದ್ದೆ, ಆದರೆ..! ಅಪ್ಪು ನೆನೆದು ಬಿಕ್ಕಳಿಸಿದ ರಾಘಣ್ಣ!
  • PublishedNovember 16, 2021

ನನ್ನ ಆಯಸ್ಸು ನಿನಗೆ ಕೊಡುತ್ತೇನೆ ಅಂತ ನಾನು ಅವನಿಗೆ ಹೇಳಿದ್ದೆ. ಆದರೆ ಅವನು ತನ್ನ ಆಯಸ್ಸು ನನಗೆ ಕೊಟ್ಟು ಹೋದ’ ಎಂದು ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ರಾಘವೇಂದ್ರ ರಾಜ್​ಕುಮಾರ್​ .

‘ನೀವೆಲ್ಲರೂ ಸೇರಿ ನನಗೊಂದು ಸಹಾಯ ಮಾಡಿ. ನನ್ನನ್ನು ಕಳಿಸಿಕೊಟ್ಟು ಅವನನ್ನು ವಾಪಸ್​ ಕರೆಸಿಕೊಳ್ಳಿ ಪ್ಲೀಸ್. ಪುನೀತ್​ ಅವರನ್ನು ಹೂತ್ತಿಲ್ಲ, ಬಿತ್ತಿದ್ದೇವೆ. ಪುನೀತ್​ ರೀತಿ ಇರುವ ನೂರಾರು ಜನ ಹುಟ್ಟಿ ಬರುತ್ತಾರೆ. ಹುಟ್ಟುವಾಗ ನನ್ನ ತಮ್ಮನಾಗಿ ಬಂದ. ವಾಪಸ್​ ಹೋಗುವಾಗ ತಂದೆಯಾಗಿ ಹೋದ. ಹೇಗೆ ಬದುಕಬೇಕು ಎಂಬುದನ್ನು ನನಗೂ ಮತ್ತು ಶಿವಣ್ಣನಿಗೂ ತಿಳಿಸಿಕೊಟ್ಟು ಹೋದ. ದಯವಿಟ್ಟು ಬಂದುಬಿಡು ಕಂದಾ. ಇಷ್ಟು ದಿನ ಈ ನೋವನ್ನು ತಡೆದುಕೊಂಡಿದ್ದೆ. ನಿನ್ನ ಜಾಗಕ್ಕೆ ನಾನು ಬರುತ್ತೇನೆ’ ಎಂದು ರಾಘಣ್ಣ ಕಂಬನಿ ಸುರಿಸಿದರು.

‘20 ದಿನ ಈ ನೋವನ್ನು ತಡೆದುಕೊಂಡಿದ್ದೆ. ನಾನು ಅತ್ತರೆ ಪುನೀತ್​ ಪತ್ನಿ ಮತ್ತು ಮಕ್ಕಳು ನೊಂದುಕೊಳ್ಳುತ್ತಾರೆ ಅಂತ ಸುಮ್ಮನಿದ್ದೆ. ಆದರೆ ಇಂದು ತಡೆದುಕೊಳ್ಳೋಕೆ ಆಗಲಿಲ್ಲ. ಅತ್ತು ಹಗುರಾಗುತ್ತೇನೆ. ಈ ನೋವು ಮರೆಯುವ ಶಕ್ತಿ ಕೊಡು ಅಂತ ದೇವರಲ್ಲಿ ಕೇಳಲ್ಲ. ಈ ನೋವಿನ ಜೊತೆಗೆ ಬದುಕುವ ಶಕ್ತಿ ಕೊಡು ಅಂತ ಕೇಳುತ್ತೇನೆ. ಅವನು ನನ್ನ ಎದೆಯೊಳಗೆ ಇದ್ದಾನೆ’ ಎಂದಿದ್ದಾರೆ ರಾಘವೇಂದ್ರ ರಾಜ್​ಕುಮಾರ್​.

****

Written By
Kannadapichhar

Leave a Reply

Your email address will not be published. Required fields are marked *