‘ಥಿಯೇಟರ್’ಗೆ 100% ಒಪ್ಪಿಗೆ..! ಇಂದು ಸಂಜೆ ಯೊಳಗೆ ಅಂತಿಮ ನಿರ್ಧಾರ ಬರುವ ಸಾಧ್ಯತೆ

ಕಳೆದ ಒಂದೂವರೆ ಎರಡು ವರ್ಷಗಳಿಂದ ಭಾರತದ ಚಿತ್ರರಂಗ ಭಾರಿ ನಷ್ಟ ಅನುಭವಿಸಿದ್ದು ಮಾತ್ರವಲ್ಲ ಹಲವರನ್ನು ಚಿತ್ರರಂಗದ ದಿಗ್ಗಜರನ್ನು ಕಳೆದುಕೊಂಡಿದೆ, ಕಾರಣ ಕೊರೊನಾ. ಕೊರೊನಾ ಕಾರಣದಿಂದ ಮಾಡಲಾದ ಲಾಕ್ ಡೌನ್ ಪರಿಣಾಮದಿಂದಾಗಿ ಚಿತ್ರರಂಗದ ಚಟುವಟಿಕೆ ನಿಂತ ನೀರಿನಂತಾಗಿತ್ತು. ಎರಡನೇ ಅಲೆ ಮುಗಿದು ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಥಿಯೇಟರ್ ಗಳ 100% ಭರ್ತಿಗೆ ಮಾತ್ರ ಅವಕಾಶ ನೀಡಿರಲಿಲ್ಲಾ, ಕೇವಲ 50% ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ಇಂದು ಸಂಜೆ ಯೊಳಗೆ ಅಂತಿಮ ನಿರ್ಧಾರ ಬರುವ ಸಾಧ್ಯತೆ:
ಸಂಪೂರ್ಣ ಭರ್ತಿಗೆ ಅವಕಾಶ ಇಲ್ಲದ ಕಾರಣ ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬರಲು ಹಿಂದು ಮುಂದು ನೋಡುತ್ತಿವೆ. ಕನ್ನಡ ಚಿತ್ರರಂಗದ ಕಲಾವಿದರು, ನಿರ್ಮಾಪಕರು ಮತ್ತು ವಾಣಿಜ್ಯ ಮಂಡಳಿ ಸರ್ಕಾರಕ್ಕೆ 100% ಭರ್ತಿಗೆ ಅವಕಾಶ ನೀಡಬೇಕೆಂದು ಹಲವು ಬಾರಿ ಮನವಿಯನ್ನು ಮಾಡಿತ್ತಾದರೂ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಸಮಯಾವಕಾಶ ಕೇಳಿದ್ದರು. ಈಗ ಶಾಲೆ, ಕಾಲೇಜು, ಜಿಮ್ , ಮಾಲ್ ಮತ್ತು ದೊಡ್ಡ ದೊಡ್ಡ ಮಾರ್ಕೇಟ್ ಗಳು ಓಪನ್ ಆಗಿದ್ದು ಕೊರೊನಾ ಕೇಸ್ ಗಳು ಕಡಿಮೆ ಆಗಿರುವ ಕಾರಣ ಚಿತ್ರಮಂದಿರಗಳ 100% ಭರ್ತಿಗೆ ಅವಕಾಶ ಕೊಡಬಹುದು ಎಂದು ಸರ್ಕಾರ ಕೂಡ ಚಿಂತಿಸಿದ್ದು ಇಂದು ಸಂಜೆಯೊಳಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಘೋಷಿಸಬಹುದು ಎಂಬ ಮಾಹಿತಿ ಹೊರಬಿದ್ದಿದೆ.