News news updates ಪಿಚ್ಚರ್ stories ಪಿಚ್ಚರ್ UPDATE

ತೆಲುಗು ಸಿನಿಮಾಕ್ಕೆ ಮೊದಲಬಾರಿಗೆ ಶಿವಣ್ಣ ಹಿರೋ! ಪಾತ್ರವೇ ವಿಭಿನ್ನ

ತೆಲುಗು ಸಿನಿಮಾಕ್ಕೆ ಮೊದಲಬಾರಿಗೆ ಶಿವಣ್ಣ ಹಿರೋ! ಪಾತ್ರವೇ ವಿಭಿನ್ನ
  • PublishedDecember 6, 2025

ಗುಮ್ಮಡಿ ನರಸಯ್ಯ ಸಿನಿಮಾದ ಮೂಲಕ ಶಿವಣ್ಣ ತೆಲುಗಿನ ಸಿನಿಮಾಕ್ಕೆ ಹಿರೋ ಆಗಿ ಪಾದರ್ಪಣೆ ಮಾಡ್ತಿದ್ದಾರೆ.. ಇಂದು ಸಿನಿಮಾದ ಮುಹೂರ್ತ ಭರ್ಜರಿಯಾಗಿ ನಡೆದಿದ್ದು, ಅದಕ್ಕೂ ಮುನ್ನ ಶಿವಣ್ಣ ದಂಪತಿ ಗುಮ್ಮಡಿ ನರಸಯ್ಯ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ದುಪ್ಪಟ್ಟು ನಿರೀಕ್ಷೆ ಇದೆ.

ಹೌದು.. ಗುಮ್ಮಡಿ ನರಸಯ್ಯ ಅವರ ಮನೆಗೆ ನಟ ಶಿವರಾಜ್​​ಕುಮಾರ್ ದಂಪತಿ ಭೇಟಿ ನೀಡಿದ್ದಾರೆ. ಇದೆ ಸಮಯದಲ್ಲಿ ಶಿವಣ್ಣನಿಗೆ ಬೆನ್ನುಲುಬಾಗಿ ಗೀತಕ್ಕ ಸಾಥ್ ನೀಡಿದ್ರು, ಈ ಫೋಟೋ ಸದ್ಯಕ್ಕೆ ಸಖತ್ ಟ್ರೆಂಡ್ ಆಗ್ತಿದೆ..

ಯೆಸ್.. ಮಾಜಿ ಶಾಸಕ ಗುಮ್ಮಡಿ ನರಸಯ್ಯ ಅವರ ಜೀವನಧಾರಿತ ಸಿನಿಮಾದಲ್ಲಿ ಶಿವರಾಜ್​​ಕುಮಾರ್ ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.. ಜೊತೆಗೆ ಕಥಾ ಹಂದರ ಡಿಫರೆಂಟಾಗಿರುವುದು ಮಾತ್ರವಲ್ಲದೆ ಗುಮ್ಮಡಿ ನರಸಯ್ಯ ಅವರ ಪಾತ್ರವನ್ನು ಸ್ವತಃ ಶಿವಣ್ಣ ಮಾಡಲಿದ್ದಾರೆ. ಹಾಗಾಗಿ ಗುಮ್ಮಡಿ ನರಸಯ್ಯ ಅವರ ಮನೆಗೆ ಭೇಟಿ ನೀಡಿದ್ದಾರೆ..

ಅಂದಹಾಗೆ.. ಇಂದು ಬೆಳಗ್ಗೆ ಅದ್ದೂರಿಯಾಗಿ ಶನಿವಾರ ಸಿನಿಮಾದ ಮುಹೂರ್ತ ಸಮಾರಂಭ ಜರುಗಿದ್ದು. ಅದಕ್ಕೂ ಮುನ್ನ ಗುಮ್ಮಡಿ ನರಸಯ್ಯ ಅವರ ಕುಟುಂಬವನ್ನು ಶಿವಣ್ಣ ಭೇಟಿಯಾಗಿ ಮಾತುಕಥೆ ನಡೆಸಿದ್ದಾರೆ.

ಇನ್ನು.. ಆಂಧ್ರ ಪ್ರದೇಶದಲ್ಲಿ ಗುಮ್ಮಡಿ ನರಸಯ್ಯ ಅವರು ಸಾಕಷ್ಟು ಖ್ಯಾತಿಯನ್ನು ಹೊಂದಿದ್ದು, 5 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ತಮ್ಮ ಸರಳ ವ್ಯಕ್ತಿತ್ವ ಕಾರಣದಿಂದ ಅವರು ಎಲ್ಲರಿಗೂ ಮಾದರಿ ಆಗಿದ್ದರು.. ಶಿವಣ್ಣ ಕೂಡ ಸಿಂಪಲ್ ಆಗಿರೋದ್ರಿಂದ ಈ ಪಾತ್ರ ಶಿವಣ್ಣನಿಗೆ ಹೇಳಿ ಮಾಡಿಸಿದ ಆಗಿರುತ್ತೆ ಅಂತಿದ್ದಾರೆ ಅಭಿಮಾನಿಗಳು..

Written By
Kannada Picchar

Leave a Reply

Your email address will not be published. Required fields are marked *