ತರುಣ್ ಸುಧೀರ್ ಹೋಮ್ ಬ್ಯಾನರ್ ನ 5 ನೇ ಸಿನಿಮಾ..! ಶರಣ್ ಹೀರೋ
ಸದ್ಯ ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಅವತಾರ ಪುರುಷ ಡಿಸೆಂಬರ್ 10 ಕ್ಕೆ ರಿಲೀಸ್ ಆಗಬೇಕಿತ್ತು ಆದರೆ ಓಮಿಕ್ರಾನ್ ಭಯದ ಹಿನ್ನಲೆಯಲ್ಲಿ ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರ ಬಿಡುಗಡೆಯನ್ನು ಮುಂದೂಡಿದ್ದಾರೆ. ಶರಣ್ ಅಭಿನಯದ ಮತ್ತೊಂದು ಸಿನಿಮಾ ಗುರು ಶಿಷ್ಯರು ಚಿತ್ರವು ತೆರೆಗೆ ಬರಬೇಕಿದೆ, ಅಷ್ಟರಲ್ಲೆ ಶರಣ್ ಮತ್ತೊಂದು ಚಿತ್ರ ಸೆಟ್ಟೇರುತ್ತಿದ್ದು ಆದರ ಮಾಹಿತಿ ಇಲ್ಲಿದೆ.
“ರೋಜ್”, “ಮಾಸ್ ಲೀಡರ್”, ” ವಿಕ್ಟರಿ 2″ ಹಾಗೂ “ಖಾಕಿ” ಚಿತ್ರಗಳ ನಿರ್ಮಾಣ ಮಾಡಿದ್ದ ತರುಣ್ ಟಾಕೀಸ್ ಸಂಸ್ಥೆಯಿಂದ “ಪ್ರೊಡಕ್ಷನ್ ನಂ 5” ನೂತನ ಚಿತ್ರ ನಿರ್ಮಾಣವಾಗುತ್ತಿದೆ. ಗಣಪತಿ ಸನ್ನಿಧಿಯಲ್ಲಿ ಈ ಸಿನಿಮಾಗೆ ಸಂಭ್ರಮದ ಚಾಲನೆ ಸಿಕ್ಕಿದೆ..
ಶರಣ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು “ಕರ್ವ” ಖ್ಯಾತಿಯ ನವನೀತ್ ನಿರ್ದೇಶಿಸುತ್ತಿದ್ದಾರೆ. ಈ ನೂತನ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಮಾನಸ ತರುಣ್ ಆರಂಭ ಫಲಕ ತೋರಿದರು. ಖ್ಯಾತ ನಿರ್ದೇಶಕ ತರುಣ್ ಸುಧೀರ್ ಕ್ಯಾಮೆರಾ ಚಾಲನೆ ಮಾಡಿದರು.
ಹಾರಾರ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ, ಕಥೆ, ಚಿತ್ರಕಥೆ ಬರೆದಿದ್ದಾರೆ. ಅಂತರರಾಷ್ಟ್ರೀಯ ಜಾಹಿರಾತುಗಳಿಗೆ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸಿರುವ ಅನೂಪ್ ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ.
ಶರಣ್ ನಾಯಕರಾಗಿ ನಟಿಸುತ್ತಿದ್ದು, ನಾಯಕಿ ಸೇರಿದಂತೆ ಉಳಿದ ತಾರಾಬಳಗದ ವಿವರ ಸದ್ಯದಲ್ಲೇ ತಿಳಿಸಲಾಗುವುದು. ಬೆಂಗಳೂರು ಹಾಗೂ ಉತ್ತರಖಂಡ್ ನಲ್ಲಿ ಚಿತ್ರೀಕರಣ ನಡೆಯಲಿದೆ. ಮಾಸಾಂತ್ಯಕ್ಕೆ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ.
****