ತಮಿಳುನಾಡು ಹಬ್ಬದಲ್ಲಿ ‘ಅಪ್ಪು’ ಫೋಟೋ ಮೆರವಣಿಗೆ…
ಪುನೀತ್ ರಾಜಕುಮಾರ್ ಅವರ ಸಾವಿಗೆ ರಾಜ್ಯದಲ್ಲಷ್ಟೆ ಅಲ್ಲದೆ ಪಕ್ಕದ ರಾಜ್ಯವಾದ ತಮಿಳು ಮತ್ತು ತೆಲುಗು ರಾಜ್ಯಗಳಲ್ಲು ಅಪ್ಪು ಅಭಿಮಾನಿಗಳು ಪುನೀತ್ ನೆನೆದು ಕಂಬನಿ ಮಿಡಿದಿದ್ದರು, ಅವರ ಸಾವು ಅಪ್ಪು ಅಭಿಮಾನಿಗಳಲ್ಲಿ ಸಾಕಷ್ಟು ನೋವು ತರಿಸಿದೆ.
ಇಂದು ತಮಿಳುನಾಡಿನ ಗುಮುಟಾಪುರ ಎಂಬ ಊರಿನಲ್ಲಿ ಗೋರೆಹಬ್ಬದಲ್ಲಿ ನಟ ಪುನೀತ್ ಗೆ ಅಭಿಮಾನಿಗಳು ನಮನ ಸಲ್ಲಿಸಿದ್ದಾರೆ. ತಮಿಳುನಾಡಿದ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಪ್ರತಿವರ್ಷ ಈ ಹಬ್ಬ ನಡೆಯುತ್ತದೆ. ಬಹುತೇಕ ಕನ್ನಡಿಗರೇ ಇರುವ ತಾಳವಾಡಿ ಪ್ರದೇಶದಲ್ಲಿ ಗೋರೆ ಹಬ್ಬ ಸಡಗರ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದಾರೆ. ಸಗಣಿಯಲ್ಲಿ ಓಕಳಿಯಾಡುವ ವಿಶಿಷ್ಟ ಗೋರೆ ಹಬ್ಬ ಇದಾಗಿದ್ದು ಅಗಲಿದ ಪುನೀತ್ ರಾಜಕುಮಾರ್ ಅವರ ಫೋಟೊವನ್ನು ಮೆರೆಸಿದ್ದಾರೆ.
ನಟ ಪುನೀತ್ ರಾಜ್ ಕುಮಾರ್ ಪೋಟೋ ಹಿಡಿದು ಶ್ರದ್ದಾಂಜಲಿ ಸಲ್ಲಿಸಿದ ತಮಿಳುನಾಡಿನ ಕನ್ನಡಿಗರು..ಸ್ವರ್ಗದಲ್ಲಿ ಡಾ ರಾಜ್ ಕುಳಿತಂತೆ, ಹಿಂಬದಿಯಿಂದ ಬಂದ ಅಪ್ಪು ತಂದೆ ಕಣ್ಣುಮುಚ್ಚಿ ನಾನು ಸ್ವರ್ಗಕ್ಕೆ ಬಂದೆ ಎಂಬ ಪೋಟೋ ಪ್ರದರ್ಶನ..ನಟ ಪುನೀತ್ ಗೆ ಜೈಕಾರ ಹಾಕಿ, ಪುನೀತ್ ನನ್ನು ನೆನೆದಿದ್ದಾರೆ ಅಭಿಮಾನಿಗಳು..
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಠಾತ್ ನಿಧನರಾಗಿ ಒಂದು ವಾರವಾಗಿದೆ. ಆದರೆ ಅಭಿಮಾನಿಗಳ ಕಣ್ಣೀರು, ಶೋಕ ಮಾತ್ರ ನಿಂತಿಲ್ಲ. ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿರುವ ಅಪ್ಪು ಸಮಾಧಿಗೆ ಜನಸಾಗರ ಹರಿದು ಬರುತ್ತಲೇ ಇದೆ. ಧಾರಾಕಾರ ಮಳೆಯನ್ನು ಕೂಡ ಲೆಕ್ಕಿಸದೆ ಪುನೀತ್ ಸಮಾಧಿಗೆ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಲೇ ಇದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಜನರು ಬಂದು ತಮ್ಮ ನೆಚ್ಚಿನ ನಟನ ಸಮಾಧಿಗೆ ನಮನ ಸಲ್ಲಿಸಿ ಹೋಗುತ್ತಿದ್ದಾರೆ. ಪೊಲೀಸರು ಸ್ಥಳದಲ್ಲಿ ನಿಯೋಜನೆಗೊಂಡು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ.
****