ಡ್ರಗ್ ಕೇಸ್ ನಟಿಯರ ನಶೆಯಾಟ ಬಯಲು:ಬಂಧನದ ಭೀತಿಯಲ್ಲಿ ರಾಗಿಣಿ, ಸಂಜನಾ

ಸ್ಯಾಂಡಲ್ ವುಡ್ ನ ನಟಿಯರಾದ ಸಂಜನಾ ಮತ್ತು ರಾಗಿಣಿ ಡ್ರಗ್ ಸೇವನೆ ಪ್ರಕರಣದ ಆರೋಪದಡಿಯಲ್ಲಿ ಜೈಲು ಸೇರಿದ್ದರು. ಸಂಜನಾ 86 ದಿನಗಳು ಹಾಗೂ ರಾಗಿಣಿ 156 ದಿನಗಳ ಕಾಲ ಜೈಲುವಾಸ ಅನುಭವಿಸಿ ನಂತರ ಜಾಮೀನು ಪಡೆದು ಹೊರಬಂದಿದ್ದರು. ಆದರೆ ಇದೀಗ ಈ ಇಬ್ಬರಿಗೂ ಮತ್ತೆ ಬಂಧನದ ಭೀತಿ ಎದುರಾಗಿದೆ.
ಹೌದು ಡ್ರಗ್ ಸೇವನೆಗೆ ಸಂಬಂಧಿಸಿದಂತೆ ನಟಿಯರ ಕೂದಲಿನ ಸ್ಯಾಂಪಲನ್ನು ಪರೀಕ್ಷೆಗೆ ಹೈದರಾಬಾದ್ ಗೆ ಕಳುಹಿಸಲಾಗಿತ್ತು. ಇದೀಗ ಹೈದರಾಬಾದ್ ನ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯ ಪ್ರಕಾರ ನಟಿ ರಾಗಿಣಿ ಹಾಗೂ ಸಂಜನಾ ಡ್ರಗ್ ಸೇವನೆ ಮಾಡಿರುವುದು ದೃಡಪಟ್ಟಿದೆ. ಈ ಕುರಿತು ತನಿಖಾಧಿಕಾರಿ ಪುನೀತ್ ಕೂಡ ಕೋರ್ಟಿಗೆ ವರದಿಯನ್ನು ಸಲ್ಲಿಸಿದ್ದಾರೆ.

ಡ್ರಗ್ಸ್ ಸೇವನೆಯ ಆರೋಪಿ ಬಂಧನಕೊಳಗಾದ ಎರಡು ಮೂರು ದಿನಗಳ ಹಿಂದೆ ಡ್ರಗ್ಸ್ ಸೇವನೆ ಮಾಡಿದ್ದರೆ ಮಾತ್ರ ಅವರ ಮೂತ್ರ ಮತ್ತು ರಕ್ತ ಪರೀಕ್ಷೆಯಲ್ಲಿ ಪಾಸಿಟಿವ್ ರಿರ್ಪೋರ್ಟ್ ದೊರೆಯುತ್ತದೆ. ಕೆಲ ಕೇಸ್ನಲ್ಲಿ ಆರೋಪಿಗಳನ್ನು ತಡವಾಗಿ ಬಂಧಿಸಿರುತ್ತೇವೆ ಆಗ ರಕ್ತ, ಮೂತ್ರ ಪರೀಕ್ಷೆಯ ಮೂಲಕ ನಿಖರವಾದ ವರದಿ ಅಸಾಧ್ಯ. ಒಂದು ಸ್ಟಡಿ ಪ್ರಕಾರ ಡ್ರಗ್ ಸೇವನೆ ಮಾಡಿದ ವ್ಯಕ್ತಿಯ ತಲೆಕೂದಲಿನಲ್ಲಿ ಒಂದು ವರ್ಷದವರೆಗೆ ಸ್ಯಾಂಪಲ್ ಇರುತ್ತದೆ ಹಾಗಾಗಿ ಆರೋಪಿಗಳ ತಲೆಕೂದಲನ್ನು ಸಿ.ಎಫ್.ಎಸ್.ಎಲ್.ಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ವರದಿ ಕುರಿತು ಮಾಹಿತಿ ನೀಡಿದ್ದಾರೆ.
ಕೋರ್ಟ್ ನಲ್ಲಿ ಸಾಕ್ಷಿಗಳ ಪರಿಶೀಲನೆಯ ನಂತರ ಆರೋಪಿಗಳ ವಿಚಾರಣೆ ಮಾಡಲಾಗುತ್ತದೆ. ಈ ನಟಿಯರಿಬ್ಬರು ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡುವ ಸಾಧ್ಯತೆಯಿದೆ ಅಲ್ಲದೆ, ಚಾರ್ಜ್ ಶೀಟ್ ಅನ್ನು ರದ್ದು ಮಾಡಲು ಕೋರಿ ಅರ್ಜಿ ಸಲ್ಲಿಸುವ ಅವಕಾಶವೂ ಇದೆ.ಆದರೆ ಕೋರ್ಟ್ ನ ತೀರ್ಪು ಹೊರಬೀಳುವವರೆಗೂ ಈ ನಟಿಯರು ಸೇಫ್.
ಇನ್ನು ಸಿ.ಎಫ್.ಎಸ್.ಎಲ್.ನ ವರದಿಯ ಕುರಿತು ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗರ್ಲಾನಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಹಾಗಾಗಿ ನಟಿಯರ ನಡೆ ಏನೆಂಬುದನ್ನು ಕಾದು ನೋಡಬೇಕಿದೆ.
****