News

ಡಾಲಿ ‘ಡಾನ್’ ಆಟದಲ್ಲಿ ‘ಕ್ರೇಜಿ’ ಆಗಮನ..

ಡಾಲಿ ‘ಡಾನ್’ ಆಟದಲ್ಲಿ ‘ಕ್ರೇಜಿ’ ಆಗಮನ..
  • PublishedSeptember 19, 2021

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಯ ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಸಿನಿಮಾ ತಂಡವನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಸೇರಿದ್ದಾರೆ. ರವಿಚಂದ್ರನ್ ಅವರು ಹೆಡ್ ಬುಷ್ ಸಿನಿಮಾದಲ್ಲಿ ಪ್ರೊಫೆಸರ್ ಪಾತ್ರ ಮಾಡುತ್ತಿದ್ದಾರೆ. ಹಾಗೆಯೆ ರವಿಚಂದ್ರನ್ ಪಾತ್ರದ ಬಗ್ಗೆ ಇನ್ನೊಂದು ರೀತಿಯ ಚರ್ಚೆಯೂ ನಡೆಯುತ್ತಿದ್ದು  ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರವಿಚಂದ್ರನ್ ನಟಿಸಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ.

”ರೌಡಿಗಳ ಕತೆಯಾದರೂ ಅದರಲ್ಲಿ ಹಿಂಸೆ ತಪ್ಪು, ರೌಡಿಸಂ ತಪ್ಪು ಎಂಬ ಸಂದೇಶ ಸಾರುವುದು ಅವಶ್ಯಕ ಹಾಗಾಗಿ ನನ್ನ ಪ್ರತಿ ಸಿನಿಮಾದಲ್ಲಿಯೂ ನಾಯಕನ (ಹಿಂಸಾಪ್ರವೃತ್ತಿಯುಳ್ಳ) ಹೆಜ್ಜೆಗಳನ್ನು ಪ್ರಶ್ನಿಸುವ ಪಾತ್ರವೊಂದನ್ನು ಸೃಷ್ಟಿಸುತ್ತೇನೆ” ಎಂದು ಹಿಂದೊಮ್ಮೆ ಅಗ್ನಿ ಶ್ರೀಧರ್ ಹೇಳಿದ್ದರು. ಅಂತೆಯೇ ‘ಹೆಡ್ಡು-ಬುಷ್’ ಸಿನಿಮಾದಲ್ಲಿ ನಾಯಕನ ನಡೆಯನ್ನು ಪ್ರಶ್ನಿಸುವ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಗ್ನಿ ಶ್ರೀಧರ್ ಕತೆ ಬರೆದಿದ್ದು, ಶೂನ್ಯ ನಿರ್ದೇಶನ ಮಾಡಿದ್ದಾರೆ, ಸಿನಿಮಾದಲ್ಲಿ ವಸಿಷ್ಠ ಸಿಂಹ, ಲೂಸ್ ಮಾದ ಯೋಗೇಶ್, ಬಾಲು ನಾಗೇಂದ್ರ, ಶ್ರುತಿ ಹರಿಹರನ್, ರಘು ಮುಖರ್ಜಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *