ಡಾಲಿಗೆ ರಾಖಿ ಕಟ್ಟಿದ ಮಂಗಳಮುಖಿಯರು

ರಾಖಿ ಹಬ್ಬ (ರಕ್ಷಾ ಬಂಧನ) ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ.
ಡಾಲಿ ಧನಂಜಯ್ ಅವರ ಮನೆಗೆ ಭೇಟಿ ನೀಡಿದ ಅಕಯ್ ಪದ್ಮಶಾಲಿ ಟೀಂ (ಲೈಂಗಿಕ ಅಲ್ಪಸಂಖ್ಯಾತರು) ಧನಂಜಯ್ ಅವರಿಗೆ ರಾಖಿ ಕಟ್ಟಿ ಸ್ವೀಟ್ ತಿನ್ನಿಸಿ ಶುಭಾಷಯ ಹೇಳಿದರು. ರಾಖಿ ಹಬ್ಬ ನಾಳೆ ಇದ್ದು ಧನಂಜಯ್ ಅವರು ನಾಳೆ ಬೆಂಗಳೂರಿನಲ್ಲಿ ಇರದ ಕಾರಣ ಅಕಯ್ ಪದ್ಮಶಾಲಿ ಮತ್ತವರ ಟೀಂ ಇಂದೇ ಅವರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು.ಇದೇ ವೇಳೆ ಎಲ್ಲರಿಗೂ ಸಿಹಿ ತಿನಿಸಿ ಖುಷಿ ಹಂಚಿಕೊಂಡ ಧನಂಜಯ್ ಸಹೋದರಿಯರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿ ಕೃತಜ್ಞತೆ ಸಲ್ಲಿಸಿದರು.

ಸಮಾಜದ ಮುಖ್ಯ ವಾಹಿನಿಯಲ್ಲಿ ಸದಾ ಅವಮಾನ, ನಿಂದನೆ, ಬೈಗುಳ್ಳಕ್ಕೆ ಒಳಗಾಗುವ ಸಮುದಾಯವೆಂದರೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯ. ಇಂತಹ ಸಮುದಾಯಕ್ಕೆ ಬೇಕಿರುವುದು ಸಿಂಪತಿಯಲ್ಲಾ , ಪ್ರೀತಿ, ಅವರ ಮನಸ್ಸುಗಳನ್ನು ಅರ್ಥಮಾಡಿಕೊಳ್ಳುವ ಮತ್ತೊಂದು ಮನಸ್ಸು, ಅಂತಹ ಮನಸ್ಸು ಡಾಲಿ ಅವರದ್ದು. ಡಾಲಿ ಧನಂಜಯ್ ಅವರು ಸಮಾಜಮುಖಿ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳಿಗೆ ಮತ್ತು ಅವರ ಹೋರಾಟಕ್ಕೆ ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಹಾಗಾಗಿ ಅಕಯ್ ಪದ್ಮಶಾಲಿ ಮತ್ತು ಟೀಂ ನಟ ಧನಂಜಯ್ ಅವರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನಕ್ಕೆ ಶುಭಾಷಯ ತಿಳಿಸಿದ್ದಾರೆ.

ಅಕಯ್ ಪದ್ಮಶಾಲಿ ಅವರು ಧನಂಜಯ್ ಅವರ ಸಿನಿಮ ರತ್ನನ್ ಪ್ರಪಂಚ ದಲ್ಲಿ ಡಾಲಿ ಜೊತೆ ಅಭಿನಯಿಸಿದ್ದಾರೆ.
****