News

ಟೈಟಲ್ ನಲ್ಲೇ ಕ್ಯೂರಿಯಾಸಿಟಿ ಹುಟ್ಟಿಸಿದ ಚಕ್ರವರ್ತಿ ಚಂದ್ರಚೂಡ ಹೊಸ ಚಿತ್ರ..! ಏನಿದು 1975..?

ಟೈಟಲ್ ನಲ್ಲೇ ಕ್ಯೂರಿಯಾಸಿಟಿ ಹುಟ್ಟಿಸಿದ ಚಕ್ರವರ್ತಿ ಚಂದ್ರಚೂಡ ಹೊಸ ಚಿತ್ರ..! ಏನಿದು 1975..?
  • PublishedOctober 7, 2021

ಸಾಹಿತಿಯಾಗಿ, ರೈಟರ್ ಆಗಿ, ಹೋರಾಟಗಾರನಾಗಿ ಕನ್ನಡ ನಾಡಿನ ಜನರಿಗೆ ಹೆಚ್ಚು ಪರಿಚಿತರಾಗಿದ್ದ ಚಕ್ರವರ್ತಿ ಚಂದ್ರಚೂಡ ಅವರು ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 8 ರಲ್ಲಿ ವೈಟ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆ ಎಂಟ್ರಿ ಪಡೆದ ನಂತರ ಚಕರ್ವರ್ತಿ ಚಂದ್ರಚೂಡ ಅವರಲ್ಲಿರುವ ನಟ, ನಿರ್ದೇಶಕ, ಬರಹಗಾರ, ಮಾತುಗಾರ ಹೀಗೆ ಮಲ್ಟಿ ಟ್ಯಾಲೆಂಟೆಡ್ ಪರ್ಸನಾಲಿಟೀಸ್ ಬಿಗ್ ಬಾಸ್ ವೇದಿಕೆ ಮೂಲಕ ಅನಾವರಣ ಗೊಂಡವು. ಅವರ ಈ ಎಲ್ಲಾ ಪ್ರತಿಭೆಗಳು ಕೂಡ ಬಿಗ್ ಬಾಸ್ ಮನೆಗೆ ಮತ್ತಷ್ಟು ಮೆರಗು ನೀಡಿದ್ದು ಕೂಡ ಸುಳ್ಳಲ್ಲ. ಹೀಗೆ ಮನೆಯಿಂದ ಹೊರ ಬಂದ ನಂತರ ಚಕ್ರವರ್ತಿ ಚಂದ್ರ ಚೂಡ ತಮ್ಮ ಹಲವು ಪ್ರಾಜೆಕ್ಟ್ ಗಳನ್ನು ಅನೌನ್ಸ್ ಕೂಡ ಮಾಡಿದ್ರು.

ನಾಯಕ ಕಂ ನಿರ್ದೇಶಕನಾಗಿ ಚಕ್ರವರ್ತಿ ಚಂದ್ರಚೂಡ

ಬಿಗ್ ಬಾಸ್ ಸೀಸನ್ 8  ವೇದಿಕೆ ಮೂಲಕ ಸಾಕಷ್ಟು ಅವಕಾಶಗಳನ್ನು ತನ್ನದಾಗಿಸಿಕೊಂಡಿರುವ ಚಕ್ರವರ್ತಿ ಅವರು ನಾಯಕರಾಗಿ ಮತ್ತು ನಿರ್ದೇಶಕರಾಗಿ ಕೆಲಸ ಮಾಡಲು ಸಾಕಷ್ಟು ಆಫರ್ ಗಳು ಬರುತ್ತಿದ್ದು, ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಹೊಸ ಚಿತ್ರದ ಪೋಸ್ಟರ್ ಶೇರ್ ಮಾಡಿದ್ದಾರೆ. ತಮ್ಮ ಹೊಸ ಚಿತ್ರದ ಟೈಟಲ್ 1975 ಎಂದಿದೆ. ಈ ಟೈಟಲ್ ಹೀಗೆ ಇರೋದು ನೋಡಿದ್ರೆ ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿದ್ದು, ಡ್ರಗ್ ಮಾಫಿಯಾ ಎಳೆಯನ್ನಿಟ್ಟುಕೊಂಡು ತಯಾರಾಗುತ್ತಿರುವ ಚಿತ್ರ ಎಂಬ ಮಾಹಿತಿ ಇದೆ. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿರುವ ಡ್ರಗ್ ಕೇಸಿಗೂ ಈ ಸಿನಿಮಾಗೂ ಏನಾದ್ರು ಸಂಬಂಧ ಇರಬಹುದು ಎಂದು ಹೇಳಲಾಗಿದ್ದು ಡ್ರಗ್ ಮಾಫಿಯಾ ಜಾಲದಲ್ಲಿ ಬಳಕೆಯಾಗುವ ಕೋಡ್ ವರ್ಡ್ ರೀತಿ ಚಿತ್ರದ ಟೈಟಲ್ ಅನ್ನು ಫ್ರೇಮ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಚಿತ್ರದ ಶೂಟಿಂಗ್ ಈಗಾಗಲೇ ಪ್ರಾರಂಭವಾಗಿದ್ದು ಮುಖ್ಯ ಪಾತ್ರದಲ್ಲಿ ಚಕ್ರವರ್ತಿ ಚಂದ್ರಚೂಡ, ಜಯ ಶಟ್ಟಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು ವಸಿಷ್ಠ ಅವರು ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ, ದಿನೇಶ್ ರಾಜನ್ ಅವರು ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.

****

Written By
Kannadapichhar

Leave a Reply

Your email address will not be published. Required fields are marked *