News

ಟಿಣಿಂಗಾ ಮಿಣಿಂಗಾ ಟಿಶ್ಯಾ ಸಕ್ಸಸ್ ಸೆಲೆಬ್ರೇಷನ್..ಹಾಡು ಹಾಡಿದ ಸಿದ್ದಿ ಜನಾಂಗದ ಪ್ರತಿಭೆಗೆ ಸನ್ಮಾನ ಮಾಡಿದ ಟೀಂ

  • PublishedAugust 13, 2021

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ದ ಅರಣ್ಯ ಪ್ರದೇಶದಲ್ಲಿ ವಾಸಮಾಡುತ್ತಿರುವ ಸಿದ್ದಿ ಸಮುದಾಯ ಪ್ರತಿಭೆಗಳಾದ ಗೀತಾ ಸಿದ್ದಿ ಮತ್ತು ಗಿರಿಜಾ ಸಿದ್ದಿ ಎಂಬ ಇಬ್ಬರು ಹೆಣ್ಣುಮಕ್ಕಳ ಮೂಲಕ ಹಾಡಿಸಿರುವ ಟಿಣಿಂಗಾ ಮಿಣಿಂಗಾ ಟಿಶ್ಯಾ… ಹಾಡು ಸಕತ್ ಹಿಟ್ ಆಗಿದ್ದು 20 ಲಕ್ಷಕ್ಕೂ ಹೆಚ್ಚು ಜನ ಹಾಡನ್ನ ವೀಕ್ಷಿಸಿದ್ದಾರೆ.

ಟಿಣಿಂಗಾ.. ಮಿಣಿಂಗಾ.. ಹಾಡಿನ ಸಕ್ಸಸ್ ಗೆ ಕಾರಣರಾಗಿರುವ ಸಿದ್ದಿ ಜನಾಂಗದ ಹೆಣು ಮಕ್ಕಳಿಗೆ ಸನ್ಮಾನ ಮಾಡುವ ಮೂಲಕ ಚಿತ್ರ ತಂಡ ಸೆಲೆಬ್ರೇಷನ್ ಮಾಡಿ ಸಿದ್ದಿ ಪ್ರತಿಭೆಗಳಿಗೆ ಗೌರವ ಸಮರ್ಪಿಸಿದೆ.  ಗೀತಾ ಸಿದ್ದಿ ಮತ್ತು ಗಿರಿಜಾ ಸಿದ್ದಿ ರಂಗಭೂಮಿ ಕಲಾವಿದರೂ ಹೌದು.  ಕಾಡಿನಲ್ಲಿರುವ ಇಂತಹ ಪ್ರತಿಭೆಗಳಿಗೆ ಅವಕಾಶ ನೀಡಿ ಅವರ ಭಾಷೆ, ಸಂಸ್ಕೃತಿ ಪರಂಪರೆ ಯನ್ನು ಹೊರ ಜಗತ್ತಿಗೆ ಪರಿಚಯಿಸುತ್ತಿರುವ ಸಲಗ ಚಿತ್ರ ತಂಡದ ಆಶಯ ನಿಜಕ್ಕೂ ಮೆಚ್ಚುವಂತಾದ್ದು.

ಸಲಗ ಪ್ರಮೋಷನಲ್ ಸಾಂಗ್ ರಿಲೀಸ್
ಸಲಗ ಪ್ರಮೋಷನಲ್ ಸಾಂಗ್

.ಈ ಸಕ್ಸಸ್ ಸೆಲೆಬ್ರೇಷನ್ ನಲ್ಲಿ ನಟ ವಿಜಯ್, ಶ್ರೀಕಾಂತ್, ಮಾಸ್ತಿ, ಚರಣ್ ರಾಜ್ ಜೊತೆ ಸಿದ್ದಿ ಹೆಣ್ಣುಮಕ್ಕಳು ಭಾಗವಹಿಸಿದ್ರು.

Written By
Kannadapichhar

Leave a Reply

Your email address will not be published. Required fields are marked *