“ಟಾಮ್ ಅಂಡ್ ಜೆರ್ರಿ” ಟ್ರೈಲರ್ ನಲ್ಲಿ ಮಾತಿನ ಜುಗಲ್ ಬಂದಿ..!
ಎಲ್ಲರಿಗೂ ಕಾರ್ಟೂನ್ ಅಂದರೆ ಸಾಕು ನೆನಪಿಗೆ ಬರೋದು ಟಾಮ್ ಅಂಡ್ ಜೆರ್ರಿ. ಅದರ ತುಂಟಾಟವನ್ನು ನೋಡಿರುತ್ತೀರಿ. ಎಳೆ ವಯಸ್ಸಿನಿಂದ, ಇಳಿ ವಯಸ್ಸಿನವರೆಗೂ ಮನರಂಜಿಸುವ ಟಾಮ್ ಅಂಡ್ ಜೆರ್ರಿ ಇದೀಗ ಸಿನಿಮಾವಾಗಿ ಬರುತ್ತಿದೆ. ಅಂದಹಾಗೆ ಕಾರ್ಟೂನಲ್ಲಿರುವ ಟಾಮ್ ಅಂಡ್ ಜೆರ್ರಿಗೂ ಸಿನಿಮಾ ರೂಪದಲ್ಲಿ ಬರುತ್ತಿರುವ ಟಾಮ್ ಅಂಡ್ ಜೆರ್ರಿಗೂ ಯಾವುದೇ ಸಂಬಂಧವಿಲ್ಲ. ಇದೊಂದು ಯೂಥ್ ಫುಲ್ ಸಬ್ಜೆಕ್ಟ್ ಅಂಶಗಳಿರುವ ಸಿನಿಮಾ. ಈ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿ ಫುಲ್ ಎಂಟರ್ ಟೈನ್ ನಿಂದ ಕೂಡಿದೆ.
ಶೀರ್ಷಿಕೆ ತಕ್ಕಂತೆ ಈ ಟ್ರೈಲರ್ ಕಿತ್ತಾಟ, ಗುದ್ದಾಟ, ಮುದ್ದಾಟ ಎಲ್ಲ ಅಂಶಗಳನ್ನು ಒಳಗೊಂಡಿದೆ. ನಾಯಕ ನಾಯಕಿಯ ನಡುವೆ ಕಚಗುಳಿ ಇಡುವ ಸಂಭಾಷಣೆ ನಿಜಕ್ಕು ಕಾರ್ಟೂನ್ ಟಾಮ್ ಆಂಡ್ ಜೆರ್ರಿಗಳನ್ನೆ ನೋಡಿದಂತಾಗುತ್ತದೆ. ಮಾತಿಗೆ ಮಾತು, ಸೇರಿಗೆ ಸವ್ವಾ ಸೇರಿನಂತಿದೆ ಇಬ್ಬರ ಡೈಲಾಗ್ ಡಿಲೆವರಿ. ಮಿಡಲ್ ಕ್ಲಾಸ್ ಹುಡುಗನಾಗಿ ಬದುಕಿನಲ್ಲಿ ಒಂದು ಗುರಿಯನ್ನಿಟ್ಟುಕೊಂಡು ಸಾಗಬೇಕೆನ್ನುವ ನಾಯಕ, ಮನುಷ್ಯ ಹೆಂಗ್ಬೇಕಾದ್ರು ಬದುಕ್ಬೋದು ಎನ್ನುವ ನಾಯಕಿ ಇವರ ಬ್ಬರ ನಡುವೆ ಯಾರು ಸರಿ? ಯಾರು ತಪ್ಪು ಎನ್ನುವಂತಹ ಜುಗಲ್ಬಂದಿ ಟ್ರೈಲರ್ ನ ಹೈಲೆಟ್.
ಈ ಹಿಂದೆ ಗಂಟುಮೂಟೆ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ನಿಶ್ಚಿತ್ ಕೊರೋಡಿ, ಮಾಯಾಬಜಾರ್ ನಲ್ಲಿ ಮಿಂಚಿದ್ದ ಚೈತ್ರಾ ರಾವ್ ಟಾಮ್ ಅಂಡ್ ಜೆರ್ರಿ ಯಲ್ಲಿ ನಾಯಕ – ನಾಯಕಿ ಯಾಗಿ ಬಣ್ಣ ಹಚ್ಚಿದ್ದಾರೆ.
ಸಿನಿಮಾ ನವೆಂಬರ್ 12 ಕ್ಕೆ ಬಿಡುಗಡೆಯಾಗುತ್ತಿದ್ದು ಟ್ರೈಲರ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸೆನ್ಸಾರ್ ಮಂಡಳಿಯಿಂದ ಯು/ ಎ ಸರ್ಟಿಫಿಕೇಟ್ ಸಿಕ್ಕಿದ್ದು,. ಈಗಾಗಲೇ ಟೈಟಲ್ ನಿಂದಲೇ ಸಖತ್ ಸದ್ದು ಮಾಡಿದ ಈ ಚಿತ್ರಕ್ಕಾಗಿ ಚಿತ್ರ ಪ್ರೇಮಿಗಳು ಕಾತುರದಿಂದ ಕಾಯ್ತಿದ್ದಾರೆ.
****