ಜಗ್ಗೇಶ್ ಜೊತೆ ಮತ್ತೊಂದು ಸಿನಿಮಾ ಮಾಡ್ತಿದೆ ಪ್ರೀಮಿಯರ್ ಪದ್ಮಿನಿ ತಂಡ..!

ಸ್ಯಾಂಡಲ್ ವುಡ್ ನ ನವರಸ ನಾಯಕ ಜಗ್ಗೇಶ್ ಅವರು ತೋತಾಪುರಿ, ರಂಗನಾಯಕ ಮತ್ತು ಹೊಂಬಾಳೆ ಫಿಲಂಸ್ ನ ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಬ್ಯೂಸಿ ಆಗಿದ್ದಾರೆ. ಈಗ ಜಗ್ಗೇಶ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿರುವ ಸುದ್ದಿ ಬಹಿರಂಗಪಡಿಸಿದ್ದಾರೆ. ರಮೇಶ್ ಇಂದಿರಾ, ಶ್ರುತಿ ನಾಯ್ಡು ನಿರ್ಮಾಣ, ನಿರ್ದೇಶನದಲ್ಲಿ ಜಗ್ಗೇಶ್ ಮತ್ತೆ ಸಿನಿಮಾ ಮಾಡುತಿದ್ದಾರೆ.
ಇದೆ ತಂಡದ ಜೊತೆ ಜಗ್ಗೇಶ‍್ ‘ಪ್ರೀಮಿಯರ್ ಪದ್ಮಿನಿ’ ಸಿನಿಮಾ ಮಾಡಿದ್ದರು. ಇದು ಜಗ್ಗೇಶ್ ಗೆ ವಿಶೇಷ ಇಮೇಜ್ ತಂದುಕೊಟ್ಟಿತ್ತು.ಈಗ ಜಗ್ಗೇಶ್ ಅದೇ ತಂಡದೊಂದಿಗೆ ಮತ್ತೊಂದು ಸಿನಿಮಾ ಮಾಡಲಿದ್ದಾರಂತೆ. ಇದರ ಕತೆ ಈಗಾಗಲೇ ಕೇಳಿದ್ದೇನೆ. ಇಷ್ಟವಾಗಿದೆ. ಮತ್ತೊಂದು ಚಿತ್ರ ಕನ್ನಡಿಗರ ಮನಗೆಲ್ಲಲು ಸರತಿಯಲ್ಲಿದೆ ಎಂದಿದ್ದಾರೆ ಜಗ್ಗೇಶ‍್. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.
****